May 12, 2026
Tuesday, May 12, 2026
spot_img

LPG ಪೂರೈಕೆಯಲ್ಲಿ ಕೊರತೆ ಇಲ್ಲ..ಆದ್ರೆ ಪ್ರಧಾನಿ ಮೋದಿ ಹೇಳಿರೋ ಸಲಹೆ ಪಾಲಿಸಿ ಎಂದ ಹರ್ದೀಪ್ ಸಿಂಗ್ ಪುರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದ ಸಂಘರ್ಷದಿಂದ ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ಒತ್ತಡ ಹೆಚ್ಚಾಗುತ್ತಿದ್ದರೂ ಭಾರತದಲ್ಲಿ LPG ಸೇರಿದಂತೆ ಇಂಧನ ಪೂರೈಕೆ ಸ್ಥಿರವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ದೇಶದ ಎಲ್‌ಪಿಜಿ ಉತ್ಪಾದನೆ ದಿನಕ್ಕೆ 35,000–36,000 ಟನ್‌ನಿಂದ ಏರಿಕೆಯಾಗಿದ್ದು ಈಗ ಸುಮಾರು 54,000 ಟನ್‌ಗೆ ತಲುಪಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

Confederation of Indian Industry ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಇಂಧನ ಕೊರತೆ ಇಲ್ಲ, ಅಗತ್ಯವಾದ ಸಂಗ್ರಹ ವ್ಯವಸ್ಥೆ ಬಲವಾಗಿದ್ದು 69 ದಿನಗಳ ಕಚ್ಚಾ ತೈಲ ಮತ್ತು LNG ಹಾಗೂ 45 ದಿನಗಳ LPG ಸಂಗ್ರಹ ದೇಶದ ಬಳಿ ಇದೆ ಎಂದು ವಿವರಿಸಿದರು. ಸರ್ಕಾರದ ತುರ್ತು ಕ್ರಮಗಳ ಪರಿಣಾಮವಾಗಿ ಪೂರೈಕೆ ಸರಪಳಿ ಸುಗಮವಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಮಿತವ್ಯಯದ ಕರೆಗಳನ್ನು ಅವರು “ಎಚ್ಚರಿಕೆಯ ಸಂದೇಶ” ಎಂದು ಬಣ್ಣಿಸಿದರು. ಜಾಗತಿಕ ಬಿಕ್ಕಟ್ಟಿನ ಪರಿಣಾಮ ಕಡಿಮೆ ಮಾಡಲು ಇಂಧನ ಮತ್ತು ಹಣಕಾಸು ಬಳಕೆಯಲ್ಲಿ ಜಾಗರೂಕತೆ ಅಗತ್ಯ ಎಂದು ಹೇಳಿದರು.

ಪ್ರಧಾನಿ ಮೋದಿ ಇತ್ತೀಚೆಗೆ ಪೆಟ್ರೋಲ್, ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದು, ಎಲೆಕ್ಟ್ರಿಕ್ ವಾಹನ ಬಳಕೆ ಹೆಚ್ಚಿಸುವುದು, ಕಾರ್‌ಪೂಲಿಂಗ್, ಮೆಟ್ರೋ ಪ್ರಯಾಣ ಮತ್ತು ವಿದೇಶಿ ಪ್ರವಾಸ ಹಾಗೂ ಚಿನ್ನ ಖರೀದಿಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಜನರಿಗೆ ಮನವಿ ಮಾಡಿದ್ದರು. ವಿದೇಶಿ ವಿನಿಮಯ ಉಳಿಸುವುದು ದೇಶದ ಆರ್ಥಿಕ ಸ್ಥಿರತೆಗೆ ಅಗತ್ಯ ಎಂದು ಅವರು ಒತ್ತಿ ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !