November 19, 2026
Thursday, November 19, 2026
spot_img

ಬೆಲೆ ಏರಿಕೆಗೆ ರಾಜ್ಯ ಸರ್ಕಾರ ಕಾರಣವಲ್ಲ, ಎಲ್ಲವೂ ಕೇಂದ್ರದ ಕೈಯಲ್ಲಿದೆ: ಸಚಿವ ಲಕ್ಷ್ಮಣ ಸವದಿ

ಹೊಸದಿಗಂತ ವರದಿ ಕಾರವಾರ:

ಒಕ್ಕೂಟ ವ್ಯವಸ್ಥೆಯಲ್ಲಿ ಬೆಲೆ ಏರಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ, ಬೆಲೆ ಏರಿಕೆ ರಾಷ್ಟ್ರ ಮಟ್ಟದಲ್ಲಿ ಆಗುತ್ತಿದೆ ಬೆಲೆ ನಿಯಂತ್ರಣ ಮಾಡುವಂತದ್ದು ಕೇಂದ್ರ ಸರ್ಕಾರದ ಕೈಯಲ್ಲಿ ಇದೆ. ಇಂಧನ ಬೆಲೆಯಾಗಲಿ ಇನ್ನಿತರ ವಸ್ತುಗಳ ಬೆಲೆಯಾಗಲಿ ಕೇಂದ್ರ ಸರ್ಕಾರ ಮಟ್ಟದಿಂದ ಏರಿಕೆಯಾಗಿದೆ. ರಾಜ್ಯ ಸರ್ಕಾರ ಬೆಲೆ ಏರಿಕೆಯ ವಿಷಯವನ್ನು ಮರೆಮಾಚಲು ಪೆಟ್ರೋಲಿನಲ್ಲಿ ಎಥೆನಾಲ್ ಮಿಶ್ರಣದ ವಿಷಯವನ್ನು ಎತ್ತಿದೆ ಎನ್ನುವ ವಾದದಲ್ಲಿ ಹುರುಳಿಲ್ಲ ಎಂದು ಸಹಕಾರ ಸಚಿವ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದ ಆಹಾರ ಮತ್ತು ನಾಗರಿಕ ಸರಬುರಾಜು ಸಚಿವ ರಿಜ್ವಾನ್ ಅರ್ಷದ್ ಅವರಿಗೆ ಇಂಧನ ಕಂಪನಿಗಳ ಯಾವುದೇ ದ್ವೇಷವಿಲ್ಲ. ಸಚಿವರು ಹಲವು ಪೆಟ್ರೋಲ್ ಪಂಪುಗಳಿಂದ ಮಾದರಿಗಳನ್ನು ಸಂಗ್ರಹಿಸಿ ಕೇಂದ್ರಕ್ಕೆ ಕಳುಹಿಸಿದ್ದಾರೆ, ಪೆಟ್ರೋಲ್ ಬಂಕ್ ಮಾಲಿಕರು ಎಥೆನಾಲ್ ಮಿಶ್ರಣ ಮಾಡುವುದು ಸುಲಭವಲ್ಲ ಇದು ಡಿಸ್ಟಲರಿಗಳಿಂದಲೇ ಬರಬೇಕು.

ಪೆಟ್ರೋಲ್ ನಲ್ಲಿ ಎಥೆನಾಲ್ ಮಿಶ್ರಣದ ಪ್ರಮಾಣವನ್ನು ರಾಜ್ಯ ಸರ್ಕಾರ ರುಜುವಾತುಪಡಿಸಿದೆ ಕೇಂದ್ರ ಸರ್ಕಾರ ಇದನ್ನು ತಳ್ಳಿ ಹಾಕಿದೆ ಅಗತ್ಯ ಬಿದ್ದರೆ ಜಂಟಿ ಸಮಿತಿಯನ್ನು ರಚಿಸಿ ಪರೀಕ್ಷೆ ನಡೆಸಬಹುದು ಎಂದರು.

ಇದನ್ನೂ ಓದಿ:

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಹೈಕಮಾಂಡ್ ಮುಂಬದಿಯಲ್ಲಿ ಆಸನ ನೀಡದೇ ನಿರ್ಲಕ್ಷ್ಯ ತೋರಿದೆ ಎಂದು ಬಿಜೆಪಿ ಟೀಕಿಸುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವ ಸವದಿ, ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಕಾರ್ಯಕ್ರಮ ಖಾಸಗಿ ಕಾರ್ಯಕ್ರಮವಾಗಿದ್ದು ಅಲ್ಲಿ ಪ್ರೋಟೊಕಾಲ್ ಪ್ರಕಾರ ಆಸನ ವ್ಯವಸ್ಥೆ ಇರುವುದಿಲ್ಲ. ಈ ವಿಷಯವನ್ನು ಟೀಕಿಸುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಪಕ್ಷವನ್ನು ಕಟ್ಟಿ ಬೆಳೆಸಿದ ಎಲ್.ಕೆ.ಆದ್ವಾನಿಯಂತ ನಾಯಕರನ್ನು ಯಾವ ರೀತಿ ನಡೆಸಿಕೊಂಡಿದ್ದಾರೆ ಎನ್ನುವುದು ಇಡೀ ದೇಶಕ್ಕೆ ತಿಳಿದಿದೆ ಎಂದು ಇದಿರೇಟು ನೀಡಿದರು.

ಪಂಚಮಸಾಲಿ ಸಮುದಾಯ ಪ್ರತ್ಯೇಕ ಮೀಸಲಾತಿಗಾಗಿ ಬೆಳಗಾವಿ ಚಲೋ ಹೋರಾಟಕ್ಕೆ ನಿರ್ಧಾರ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಲಕ್ಷ್ಮಣ ಸವದಿ, ಪಂಚಮಸಾಲಿ ಸಮುದಾಯದ ಪ್ರತ್ಯೇಕ ಮೀಸಲಾತಿಯ ಬೇಡಿಕೆ ಹಿಂದಿನಿಂದಲೂ ಇದೆ ಈ ಸಂಬಂಧ ಸುಪ್ರಿಂ ಕೋರ್ಟಿನಲ್ಲಿ ವ್ಯಾಜ್ಯ ದಾಖಲಾಗಿರುವುದರಿಂದ ಕಾನೂನಾತ್ಮಕ ನಿರ್ಭಂಧಗಳಿವೆ ಈ ವಿಷಯದ ಕುರಿತು ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

Must Read

Skip to toolbar