October 15, 2026
Thursday, October 15, 2026
spot_img

ಮತ್ತೆ ಶುರುವಾಯ್ತು ಅಮೆರಿಕ-ಇರಾನ್ ಸಮರ: ‘ಟಾಪ್ ಕಮಾಂಡರ್’ಗಳನ್ನೇ ಮುಗಿಸಿದ್ವಾ ಟ್ರಂಪ್ ಪಡೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್ ಮಿಲಿಟರಿಯ ಉನ್ನತ ಕಮಾಂಡರ್‌ಗಳನ್ನು ಹತ್ಯೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಟ್ರಂಪ್, “ತನ್ನ ಪಡೆಯನ್ನು ಅತ್ಯಂತ ಕಳಪೆಯಾಗಿ ಮತ್ತು ಅವಿವೇಕತನದಿಂದ ಮುನ್ನಡೆಸುತ್ತಿದ್ದ ಇರಾನ್ ಸೇನೆಯ ಪ್ರಮುಖ ನಾಯಕರನ್ನು ನಾವು ನಿರ್ಮೂಲನೆ ಮಾಡಿದ್ದೇವೆ,” ಎಂದು ಬರೆದುಕೊಂಡಿದ್ದಾರೆ. ಟ್ರಂಪ್ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಯುದ್ಧ ವಿಮಾನಗಳ ಭೀಕರ ಸದ್ದು ಮತ್ತು ಸರಣಿ ಸ್ಫೋಟಗಳು ಕಂಡುಬಂದಿವೆ.

ಆದಾಗ್ಯೂ, ಹತ್ಯೆಗೀಡಾದ ಕಮಾಂಡರ್‌ಗಳ ಅಧಿಕೃತ ಪಟ್ಟಿಯನ್ನು ಶ್ವೇತಭವನ ಇನ್ನೂ ಬಿಡುಗಡೆ ಮಾಡಿಲ್ಲ. ಇತ್ತ ಇರಾನ್ ಕೂಡ ತನ್ನ ಸೇನಾ ಅಧಿಕಾರಿಗಳ ಸಾವಿನ ಕುರಿತು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

Must Read