October 11, 2026
Sunday, October 11, 2026
spot_img

ಅವರಿಬ್ಬರ ಬ್ಯಾಟಿಂಗ್‌ ಗೆಲುವಿಗೆ ಅಡಿಪಾಯ ಹಾಕಿದ್ದು: RCB ಕ್ಯಾಪ್ಟನ್ ಯಾರ್ ಬಗ್ಗೆ ಹೇಳಿದ್ದು ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅದ್ಭುತ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲಿ ಸಮತೋಲನದ ಪ್ರದರ್ಶನ ನೀಡಿದ ಆರ್‌ಸಿಬಿ, 43 ರನ್‌ಗಳ ಅಂತರದಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಪಂದ್ಯದ ನಂತರ ಮಾತನಾಡಿದ ನಾಯಕ ರಜತ್ ಪಾಟೀದಾರ್, ತಂಡದ ಆರಂಭಿಕ ಜೋಡಿ ನೀಡಿದ ವೇಗದ ಆರಂಭವೇ ಗೆಲುವಿಗೆ ಅಡಿಪಾಯವಾಯಿತು ಎಂದು ಹೇಳಿದರು. ವಿಶೇಷವಾಗಿ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರ ಬ್ಯಾಟಿಂಗ್‌ನ್ನು ಅವರು ಮೆಚ್ಚಿಕೊಂಡರು.

13ನೇ ಓವರ್ ಬಳಿಕ ರನ್‌ರೇಟ್ ಹೆಚ್ಚಿಸುವುದು ಮುಖ್ಯ ಗುರಿಯಾಗಿತ್ತು. ಅದಕ್ಕೆ ತಕ್ಕಂತೆ ತಾವು ಹಾಗೂ ಟಿಮ್ ಡೇವಿಡ್ ವೇಗವಾಗಿ ಬ್ಯಾಟ್ ಮಾಡಿದ್ದೇವೆ ಎಂದು ಪಾಟೀದಾರ್ ತಿಳಿಸಿದರು. ಟಿಮ್ ಡೇವಿಡ್ ವಿಶ್ವದ ಶ್ರೇಷ್ಠ ಫಿನಿಶರ್‌ಗಳಲ್ಲಿ ಒಬ್ಬರು ಎಂದು ಕೊಂಡಾಡಿದರು.

ಇದನ್ನೂ ಓದಿ:

ಬೌಲಿಂಗ್ ವಿಭಾಗದಲ್ಲೂ ಜೇಕಬ್ ಡಫಿ ಅವರ ಸ್ವಿಂಗ್ ಹಾಗೂ ಭುವನೇಶ್ವರ್ ಕುಮಾರ್ ಎಸೆದ ಡೆತ್ ಓವರ್ ಯಾರ್ಕರ್‌ಗಳು ಪಂದ್ಯವನ್ನು ಆರ್‌ಸಿಬಿ ಪರ ತಿರುಗಿಸಿವೆ ಎಂದು ಹೇಳಿದರು. ಕೃನಾಲ್ ಪಾಂಡ್ಯ, ಸುಯಶ್ ಶರ್ಮಾ ಹಾಗೂ ರೊಮಾರಿಯೋ ಶೆಫರ್ಡ್ ಅವರ ಕೊಡುಗೆಯನ್ನೂ ಅವರು ಸ್ಮರಿಸಿದರು.

ಬ್ಯಾಕ್ ಟು ಬ್ಯಾಕ್ ಗೆಲುವಿನಿಂದ ತಂಡ ಉತ್ತಮ ಲಯದಲ್ಲಿದ್ದು, ಏಪ್ರಿಲ್ 10ರಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲೂ ಇದೇ ಜೋಷ್ ಮುಂದುವರಿಸಲು ಸಜ್ಜಾಗಿದೆ.

Must Read