September 28, 2026
Monday, September 28, 2026
spot_img

ಕೇಂದ್ರದಿಂದ ಬಿಡುಗಡೆಯಾದ ಅನುದಾನದ ದುರುಪಯೋಗ ಆಗಿದೆ: ಬಿ.ವೈ. ವಿಜಯೇಂದ್ರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಕೇಂದ್ರದಿಂದ ಬಂದ ವಿಶೇಷ ಸಹಾಯಧನದ ಬಳಕೆಯ ವಿಚಾರ ಈಗ ಮತ್ತೆ ರಾಜಕೀಯ ಚರ್ಚೆಗೆ ಕಾರಣವಾಗಿದೆ.

ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, 2025-26 ಸಾಲಿನ ಮೂಲಧನ ಹೂಡಿಕೆಗೆ ನೀಡಲಾಗಿದ್ದ 1,323.96 ಕೋಟಿ ರೂಪಾಯಿಗಳನ್ನು ನಿಗದಿತ ಯೋಜನೆಗಳಿಗೆ ಬಳಸದೇ ಇತರೆ ಕಾರ್ಯಗಳಿಗೆ ತಿರುಗಿಸಲಾಗಿದೆ ಎಂದು ಆರೋಪಿಸಿದದ್ದಾರೆ.

ಸಣ್ಣ ನೀರಾವರಿ ಯೋಜನೆಗಳಿಗೆ ಈ ಹಣ ತಲುಪಿಲ್ಲ ಎಂದು ಆರೋಪಿಸಿದ ಅವರು, ಹಣಕಾಸು ಇಲಾಖೆ ಮೊತ್ತವನ್ನು ತಡೆದು ಮುಂದಿನ ಹಂತದ ಅನುದಾನ ಪಡೆಯಲು ಕೃತಕ ಬಳಕೆ ಪ್ರಮಾಣಪತ್ರ ನೀಡುವಂತೆ ಒತ್ತಡ ಹೇರಲಾಗಿದೆ ಎಂದು ಹೇಳಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:

ಇನ್ನೂ ವಾಲ್ಮೀಕಿ ನಿಗಮ ಪ್ರಕರಣವನ್ನು ಉಲ್ಲೇಖಿಸಿ, ಕೋಟ್ಯಾಂತರ ರೂಪಾಯಿಗಳ ವರ್ಗಾವಣೆ ಮುಖ್ಯಮಂತ್ರಿಗಳ ಗಮನವಿಲ್ಲದೆ ಸಾಧ್ಯವಿಲ್ಲ ಎಂದು ಹೇಳಿದರು. ಗೃಹಲಕ್ಷ್ಮಿ ಯೋಜನೆಗೆ ಮೀಸಲಾದ 5,000 ಕೋಟಿ ರೂಪಾಯಿಗಳ ಸ್ಥಿತಿಗತಿಯನ್ನು ತಿಳಿಸಬೇಕೆಂದು ಕೂಡ ಒತ್ತಾಯಿಸಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅನುದಾನ ಕಡಿತಗೊಂಡಿದೆ ಎಂದು ಆರೋಪಿಸಿ, ಮುಂದಿನ ಬಜೆಟ್‌ನಲ್ಲಿ 1,000 ಕೋಟಿ ರೂಪಾಯಿ ಮೀಸಲಿಡಬೇಕು ಎಂದರು.

Must Read