September 14, 2026
Monday, September 14, 2026
spot_img

ನಿತ್ಯವೂ ಮಾಡೋ ಈ ಐದು ತಪ್ಪುಗಳಿಂದ ಗ್ಯಾಸ್ಟ್ರಿಕ್‌ ಮತ್ತೆ ಮತ್ತೆ ಬರತ್ತೆ, ಈ ಟಿಪ್ಸ್‌ ಫಾಲೋ ಮಾಡಿ

ಗ್ಯಾಸ್‌ ಬರೋ ಅಂತ ಊಟತಿಂಡಿ ತಿನ್ನೋದಿಲ್ಲ ಆದರೂ ಗ್ಯಾಸ್ಟ್ರಿಕ್‌ ಮಾತ್ರ ನಮ್ಮನ್ನು ಬಿಟ್ಟು ದೂರ ಹೋಗ್ತಿಲ್ಲ ಅಂದ್ರೆ ನೀವು ನಿತ್ಯ ಮಾಡುವ ಅಭ್ಯಾಸದಲ್ಲಿ ಸಣ್ಣ ಕೆಲಸಗಳನ್ನು ರೂಢಿ ಮಾಡಿ..

ಬೆಳಗ್ಗೆ ಎದ್ದ ಅರ್ಧದಿಂದ ಮುಕ್ಕಾಲು ಗಂಟೆಯೊಳಗೆ ಏನಾದ್ರೂ ತಿನ್ನಿ. ಜಂಕ್‌ ಅಲ್ಲ ಆರೋಗ್ಯಕರವಾದ ಯಾವುದೇ ಆಹಾರ ಪದಾರ್ಥ ತಿನ್ನಿ. ಒಂದೇ ಬಾರಿ ಗಬಗಬ ತಿನ್ನುವ ಬದಲು ಊಟವನ್ನು ನಿಧಾನಕ್ಕೆ ಸಣ್ಣ ತುತ್ತುಗಳಲ್ಲಿ ತಿನ್ನಿ. ಚೆನ್ನಾಗಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ನಿಮಗೆ ಯಾವ ಆಹಾರದಿಂದ ಗ್ಯಾಸ್‌ ಆಗುತ್ತದೆ ಗಮನಿಸಿ. ಗೆಣಸು, ಮೊಟ್ಟೆ, ಮಂಡಕ್ಕಿ ಇನ್ನಿತರ ಪದಾರ್ಥಗಳು ಕೆಲವರಿಗೆ ಗ್ಯಾಸ್‌ ನೀಡುತ್ತದೆ. ಇಂಥವುಗಳನ್ನು ಖಾಲಿ ಹೊಟ್ಟೆಯಲ್ಲಿ ತಿನ್ನೋದು ಅವಾಯ್ಡ್‌ ಮಾಡಿ.

ನಿಮ್ಮ ಬಾಯಿಯಲ್ಲಿ ಇಪ್ಪತ್ತರಿಂದ ಮೂವತ್ತು ಬಾರಿ ಅಗಿದು ತಿನ್ನಿ. ಇದರಿಂದ ಹೊಟ್ಟೆಗೆ ಕೆಲಸ ಕಡಿಮೆ ಆಗುತ್ತದೆ. ದೊಡ್ಡದಾಗಿ ಸದ್ದು ಮಾಡುತ್ತಾ ಬಾಯಿ ತೆಗೆದು ತಿನ್ನಬೇಡಿ.

ಊಟ ಆದ ನಂತರ ಒಂದು ಕಡೆ ಕೂರುವುದನ್ನು ಅವಾಯ್ಡ್‌ ಮಾಡಿ. ಊಟ ಆದ ನಂತರ ಸ್ವಲ್ಪ ಓಡಾಟ ಮಾಡಿ. ಆಗ ತೇಗು ಬರುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !