ಹೊಸದಿಗಂತ ವರದಿ ಅಂಕೋಲಾ:
ತಾಲೂಕಿನ ಬಸ್ ನಿಲ್ದಾಣದಲ್ಲಿ ಕಾರವಾರಕ್ಕೆ ಹೊರಟಿದ್ದ ಪ್ರಯಾಣಿಕರೋರ್ವರ ಹಣವನ್ನು ಕಳ್ಳತನ ಮಾಡಿದ ಆರೋಪಿಗಳನ್ನು ಕೆಲವೇ ಗಂಟೆಗಳ ಅವಧಿಯಲ್ಲಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರವಾರದಲ್ಲಿ ಆಟೋ ಚಾಲಕನಾಗಿರುವ ಅಂಕೋಲಾ ತಾಲೂಕಿನ ಕೇಣಿಯ ನಿವಾಸಿ ಪ್ರದೀಪ ಪುರ್ಸಪ್ಪ ಕೇಣಿ ಎನ್ನುವವರು ಬುಧವಾರ ಮಧ್ಯಾಹ್ನ 1 ಗಂಟೆಯಿಂದ 1:15 ರ ನಡುವಿನ ಅವಧಿಯಲ್ಲಿ ತಮ್ಮ ಕುಟುಂಬದವರೊಂದಿಗೆ ಕಾರವಾರಕ್ಕೆ ತೆರಳಲು ಬಸ್ ಹತ್ತುವ ಸಂದರ್ಭದಲ್ಲಿ ಪ್ಯಾಂಟಿನ ಕಿಸೆಯಲ್ಲಿದ್ದ 7500 ರೂಪಾಯಿ ಹಣವನ್ನು ಯಾರೋ ಕಳ್ಳತನ ಮಾಡಿರುವ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದನ್ನೂ ಓದಿ:
ದೂರಿನನ್ವಯ ತನಿಖೆ ಆರಂಭಿಸಿದ ಅಂಕೋಲಾ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಮತ್ತಿತರ ತಾಂತ್ರಿಕ ನೆರವಿನಿಂದ ಬುಧವಾರ ರಾತ್ರಿ ಜಿಲ್ಲೆಯ ಸಿದ್ದಾಪುರ ಬಳಿ ಹುಬ್ಬಳ್ಳಿ ಸುತ್ತ ಮುತ್ತಲಿನ 6 ಜನರನ್ನು ಬಂಧಿಸಿದ್ದು, ಖಾಸಗಿ ವಾಹನದಲ್ಲಿ ಆಗಮಿಸಿದ ಅವರು ಕಳ್ಳತನದ ಕೃತ್ಯ ಎಸಗಿರುವುದು ಖಚಿತವಾಗಿದೆ. ಬಂಧಿತರ ಕುರಿತಂತೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.



