October 10, 2026
Saturday, October 10, 2026
spot_img

ROBBERY | ನೀಟಾಗಿ ಗೋಡೆ ಕೊರೆದು ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಕದ್ದೊಯ್ದ ಕಳ್ಳರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ಕಳ್ಳರ ಕೈಚಳಕ ಹೆಚ್ಚಾಗುತ್ತಿದೆ. ಚಿನ್ನ ಬೆಳ್ಳಿ ರೇಟ್‌ ಹೆಚ್ಚಳವಾಗಿದ್ದೇ ತಡ ರಾಬರಿ ಕೇಸ್‌ಗಳು ಜಾಸ್ತಿಯಾಗುತ್ತಿವೆ, ದಾಸರಹಳ್ಳಿಯ ಎಂಟನೇ ಮೈಲಿ ಬಳಿಯ ಹಾವನೂರಿನಲ್ಲಿರುವ ಎಂಬಿ ಜ್ಯುವೆಲ್ಲರ್ಸ್‌ನಲ್ಲಿ ಕಳ್ಳತನ ನಡೆದಿದೆ.

ಬಹಳ ದಿನಗಳಿಂದ ವ್ಯವಸ್ಥಿತವಾದ ಪ್ಲಾನ್‌ ಮಾಡಿರುವ ಖದೀಮರು ಪಕ್ಕದಂಗಡಿಯ ಬೀಗ ಒಡೆದು ಒಳಕ್ಕೆ ನುಗ್ಗಿದ್ದಾರೆ. ಸದ್ದು ಬಾರದಂತೆ ಗೋಡೆ ಕೊರೆದು ಬಂಗಾರದ ಅಂಗಡಿಯೊಳಕ್ಕೆ ನುಗ್ಗಿದ್ದಾರೆ.

ಸುಮಾರು 70 ಕೆಜಿ ಬೆಳ್ಳಿ ವಸ್ತುಗಳನ್ನು ಕಳ್ಳರು ಎಗರಿಸಿದ್ದಾರೆ. ಇದರ ಬೆಲೆ ಒಂದು ಕೋಟಿ ರೂಪಾಯಿಗೂ ಮೇಲಿದೆ. ಸದ್ಯ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಕಳ್ಳರ ಪ್ಲಾನ್‌, ಸಿಸಿಟಿವಿಯಲ್ಲಿ ಅವರ ಚಲನವಲನವನ್ನು ಗಮನಿಸಿದ್ದಾರೆ.

ಕಳ್ಳರಿಗಾಗಿ ತೀವ್ರ ಶೋಧ ಮುಂದುವರಿದಿದೆ.

Must Read