ಮಹಿಳೆಯರ ಕೆಟ್ಟ ಲೈಫ್‌ಸ್ಟೈಲ್‌ನಿಂದಾಗಿ ಬ್ರೆಸ್ಟ್ ಕ್ಯಾನ್ಸರ್ ಜೀವನದ ಕದ ತಟ್ಟುವಂತಾಗಿದೆ. ಇತ್ತೀಚೆಗೆ ಬ್ರೆಸ್ಟ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಹಿಳೆಯರು ಎಚ್ಚೆತ್ತುಕೊಳ್ಳದೇ ಹೋದಲ್ಲಿ ಜೀವಕ್ಕೆ ಅಪಾಯವಿದೆ.
ಯಾವ ಕಾರಣಕ್ಕೆ ಬರತ್ತೆ ಈ ಬ್ರೆಸ್ಟ್ ಕ್ಯಾನ್ಸರ್?
ಅತಿಯಾದ ತೂಕ
ಇನ್ಸುಲಿನ್ ಪ್ರತಿರೋಧ
ಮಧುಮೇಹ
ಅತಿಯಾದ ಸ್ಟ್ರೆಸ್
ನಿದ್ದೆಯ ಕೊರತೆ
ತಂಬಾಕು ಸೇವನೆ, ದೇಹದ ಕೊಬ್ಬಿನ ಪ್ರಮಾಣ, ಸಂತಾನೋತ್ಪತ್ತಿ ಚಿಕಿತ್ಸೆಗಳು ಮತ್ತು ತಡಗರ್ಭಧಾರಣೆಯಿಂದ ಉಂಟಾಗುವ ದೀರ್ಘಕಾಲದ ಇಸ್ಟ್ರೋಜನ್ ಪ್ರಭಾವವು ಸ್ತನ ಮತ್ತು ಎಂಡೋಮೆಟ್ರಿಯಲ್ ಕ್ಯಾನ್ಸರ್‌ಗಳಂತಹ ಹಾರ್ಮೋನ್ ಕ್ಯಾನ್ಸರ್‌ಗಳಿಗೆ ಹೆಚ್ಚು ಕಾರಣವಾಗಿದೆ.
ಲಕ್ಷಣಗಳೇನು?
ರಕ್ತಸ್ರಾವ
ಸ್ತನದಿಂದ ದ್ರವ ಬರುವುದು
ಸಣ್ಣ ಗಡ್ಡೆ ( ನೋವು ಇರಬಹುದು, ಇರದೇ ಇರಬಹುದು)
ಹಾರ್ಮೋನ್ ಸಮಸ್ಯೆ
ಸ್ತನ ಅಥವಾ ಕಂಕುಳಿನಲ್ಲಿ ಗಂಟು
ನಿಪ್ಪಲ್‌ನಲ್ಲಿ ಬದಲಾವಣೆ
ಸ್ತನದ ಭಾಗದ ಚರ್ಮದಲ್ಲಿ ಬದಲಾವಣೆ
ಎದೆ ನೋವು
ಸ್ತನ ಕೆಂಪಾಗುವುದು ಅಥವಾ ಊದಿಕೊಳ್ಳುವುದು
ಸ್ತನದ ಆಕಾರದಲ್ಲಿ ಬದಲಾವಣೆ
ನಿಪ್ಪಲ್ ಕಡಿತ



