October 11, 2026
Sunday, October 11, 2026
spot_img

ಗಣೇಶ ಮೆರವಣಿಗೆ ವೇಳೆ ಮೇಲಿನಿಂದ ಮಾಂಸ ಎಸೆದಿದ್ದ ಮೂವರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಲ್ಲಿ ನಿಂತು ಮಾಂಸದ ತುಂಡುಗಳನ್ನು ಮೆರವಣಿಗೆಯತ್ತ ಎಸೆದಿದ್ದ ಮೂವರು ಆರೋಪಿಗಳನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.

ನಿನ್ನೆ ಮಧ್ಯಾಹ್ನ ಮೂರು ಗಂಟೆಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಆರಂಭವಾಗಿತ್ತು. ಈ ವೇಳೆ ಏಳನೇ ಮಹಡಿಯಲ್ಲಿದ್ದ ಮೂವರಾದ ಮೊಹಮ್ಮದ್‌ ಇಮ್ರಾನ್‌ ಖುರೇಷಿ, ಅರ್ಷಿಯಾ ಬೇಗ ಹಾಗೂ ಸಬೀನಾ ಎನ್ನುವವರು ಮೇಲಿನಿಂದ ಮಾಂಸದ ತುಂಡುಗಳನ್ನು ಎಸೆದು ಬಚ್ಚಿಟ್ಟುಕೊಂಡಿದ್ದಾರೆ. ಮೇಲಿನಿಂದ ಮಾಂಸ ಬಿದ್ದಿದೆ. ಆದರೆ ಎಲ್ಲಿಂದ ಬಿತ್ತು? ಯಾರು ಹಾಕಿದ್ರು ಎಂದು ಗೊತ್ತಾಗದೇ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ದೇವರ ವಿಗ್ರಹದ ಬಳಿ ಮಾಂಸ ಎಸೆದಿದ್ದಕ್ಕೆ ಭಕ್ತಾದಿಗಳು ಕ್ರೋಧಿತರಾಗಿದ್ದರು.

ಇದೀಗ ಮೂವರನ್ನು ಅರೆಸ್ಟ್‌ ಮಾಡಿದ್ದು, ಶೀಘ್ರದಲ್ಲೇ ಉಳಿದ ಮಾಹಿತಿ ಲಭ್ಯವಾಗಲಿದೆ. ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೊಗಳು ಹರಿದಾಡಿದರೆ ಪರಿಶೀಲನೆ ಮಾಡದೇ ನಂಬಬೇಡಿ ಎಂದು ಡಿಸಿಪಿ ಮನವಿ ಮಾಡಿದ್ದಾರೆ.

Must Read