October 13, 2026
Tuesday, October 13, 2026
spot_img

ಇಂದು ಆಶ್ಲೇಷ ನಕ್ಷತ್ರದ ದಿನ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ 2500ಕ್ಕೂ ಅಧಿಕ ಆಶ್ಲೇಷ ಬಲಿ ಸೇವೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಶ್ಲೇಷ ನಕ್ಷತ್ರದ ದಿನವಾದ ಶುಕ್ರವಾರ ಅಧಿಕ ಸಂಖ್ಯೆಯ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿಸಿದ್ದು, ಸುಮಾರು 2500 ಸಾವಿರಕ್ಕೂ ಅಧಿಕ ಆಶ್ಲೇಷ ಬಲಿ ಸೇವೆ ನೆರವೇರಿದೆ.

ಸಾಮಾನ್ಯವಾಗಿ ಬೆಳಗ್ಗೆ ಗಂಟೆ 6:30ಕ್ಕೆ ಆರಂಭವಾಗಿ 3 ಬ್ಯಾಚ್ ಹಾಗೂ ಸಂಜೆ ಗಂಟೆ 5 ಯಿಂದ ಒಂದು ಬ್ಯಾಚಿನೊಂದಿಗೆ ಸೇವೆ ನಡೆಯುತ್ತದೆ. ಆದರೆ ಇಂದು ಪ್ರತಿದಿನಕ್ಕಿಂತ ಅಧಿಕ ಪಾಳಿಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯ ಆಶೇಷಬಲಿ ಸೇವೆ ನೆರವೇರಿಸಿದರು. ಉಳಿದಂತೆ ಇತರ ಪ್ರಮುಖ ಸೇವೆಗಳಾದ ನಾಗಪ್ರತಿಷ್ಠೆ, ತುಲಾಭಾರ, ಶೇಷಸೇವೆ, ಕಾರ್ತಿಕಪೂಜೆ, ಮಹಾಪೂಹೆ, ಮಹಾಭಿಷೇಕಗಳು ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ನೆರವೇರಿತು.

Must Read