ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರೀಷ್ಕರಣೆ ಇಂದು ಕೊನೆಯಾಗಲಿದೆ. ಈ ಪ್ರಕ್ರಿಯೆಯಲ್ಲಿ ಗಣತಿ ನಮೂನೆ ವಾಪಾಸ್ ನೀಡಲು ಇಂದು ಸಂಜೆ ನಾಲ್ಕು ಗಂಟೆಯವರೆಗೆ ಮಾತ್ರ ಅವಕಾಶ ನೀಡಲಾಗಿದೆ.
ಈಗಾಗಲೇ ಬೂತ್ ಮಟ್ಟದ ಅಧಿಕಾರಿ ಮೂಲಕ ಗಣತಿ ನಮೂನೆ ಪಡೆದಿದ್ದರೆ, ಅದರಲ್ಲಿ ಬೇಕಾದ ಮಾಹಿತಿಯನ್ನು ಭರ್ತಿ ಮಾಡಿ, ಸಹಿ ಮಾಡಿ ಇಂದು ಸಂಜೆ 4 ಗಂಟೆಯೊಳಗೆ ಸಂಬಂಧಪಟ್ಟ ಬಿಎಲ್‌ಒಗೆ ವಾಪಸ್ ನೀಡಬೇಕು.
ಎಷ್ಟು ಮತದಾರರ ಹೆಸರು ಡಿಲೀಟ್?
ರಾಜ್ಯದಲ್ಲಿ ಒಟ್ಟಾರೆ 5,54,32,314 ಮತದಾರರು ಇದ್ದಾರೆ. ನಿನ್ನೆ ಸಂಜೆ ನಾಲ್ಕು ಗಂಟೆಯವರೆಗೆ ಒಟ್ಟಾರೆ 1,08,34,595 ಮತದಾರರನ್ನು ASDDO ವರ್ಗಕ್ಕೆ ಸೇರಿಸಲಾಗಿದೆ. ಇದರಲ್ಲಿ 15,30,449 ಮಂದಿ Absent, 65,62,586 ಮಂದಿ ಪರ್ಮನೆಂಟ್ಲಿ ಶಿಫ್ಟೆಡ್, 16,38,600 ಮಂದಿ ಡೆತ್, 7,07,095 ಮಂದಿ ಡ್ಯುಪ್ಲಿಕೇಟ್‌ಮತ್ತು 3,95,865 ಮಂದಿ ಸದರ್ಸ್ ವರ್ಗದಲ್ಲಿದ್ದಾರೆ. ಒಟ್ಟಾರೆ 1.08 ಕೋಟಿ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್ ಆಗುವ ಸಾಧ್ಯತೆ ಇದೆ.
ಹೆಸರು ರದ್ದಾಗಿದ್ದರೆ ಏನು ಮಾಡೋದು?
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೆಸರು ರದ್ದಾಗಿದೆ ಎಂದರೆ ಆ ಮತದಾರರನ್ನು ಆಬ್ಸೆಂಟ್, ಶಿಫ್ಟ್, ಡೆತ್, ಡ್ಯುಪ್ಲಿಕೇಟ್ ಅಥವಾ ಅದರ್ಸ್ ಕೆಟಗರಿಗೆ ಸೇರಿಸಲಾಗಿರುತ್ತದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿರ್ಲಕ್ಷ್ಯ ಮಾಡದೇ ಸಂಬಂಧಪಟ್ಟ ಬಿಎಲ್‌ಒ ಬಳಿ ಹೋಗಿ. ಅವರು ಮುಂದೇನು ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ನೀಡುತ್ತಾರೆ. ಅವರು ಕೇಳುವ ಅಗತ್ಯ ಮಾಹಿತಿಯನ್ನು ನೀಡಿ ರೋಲ್ ಬ್ಯಾಕ್ ಮಾಡಿಸಿಕೊಳ್ಳಿ. ಇಲ್ಲವಾದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸುವುದಿಲ್ಲ.
ಕರಡು ಪಟ್ಟಿ ಯಾವಾಗ ಪ್ರಕಟ?
ಬಿಎಲ್‌ಒಗಳು ಅರ್ಹ ಮತದಾರರನ್ನು ಬೇರೆ ಬೇರೆ ವರ್ಗಕ್ಕೆ ಸೇರಿಸಿದ್ದಾರೆ ಎಂದು ಜನ ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಎಸ್‌ಐಆರ್ ವೇಳಾಪಟ್ಟಿಯನ್ನು ಎರಡು ಬಾರಿ ಪರಿಷ್ಕರಿಸಿ ರೋಲ್ ಬ್ಯಾಕ್ ಮಾಡಲು ಅವಕಾಶ ಇದೆ. ಮನೆ-ಮನೆ ಭೇಟಿ ಮತ್ತು ರೋಲ್‌ಬ್ಯಾಕ್‌ಗೆ ನೀಡಿರುವ ಸಮಯ ಆ. 17ಕ್ಕೆ ಮುಕ್ತಾಯವಾಗಲಿದೆ. ಬಳಿಕ ಆಗಸ್ಟ್ 24ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.



