October 8, 2026
Thursday, October 8, 2026
spot_img

65 ಬಿಲಿಯನ್ ಬ್ಯಾರೆಲ್ ತೈಲದ ಮೇಲೆ ಟ್ರಂಪ್ ಕಣ್ಣು: ವೆನಿಜುವೆಲ್ಲ ಜತೆ ಅಮೆರಿಕದ ಐತಿಹಾಸಿಕ ಒಪ್ಪಂದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ವೆನಿಜುವೆಲ್ಲದ ನಡುವೆ ಐತಿಹಾಸಿಕ ಒಪ್ಪಂದ ಒಂದು ಸದ್ದಿಲ್ಲದೆ ನಡೆದಿದೆ.

ಈ ಒಪ್ಪಂದದ ಪ್ರಕಾರ ಸುಮಾರು 65 ಬಿಲಿಯನ್ ಬ್ಯಾರಲ್ ತೈಲ ಸಂಗ್ರಹಣೆಯ ಮೇಲೆ ಅಮೆರಿಕ ನಿಯಂತ್ರಣ ಪಡೆದುಕೊಳ್ಳಲಿದೆ ಎಂದು ಟ್ರಂಪ್ ಹೇಳಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೋಬಿಯೋ ಈ ಒಪ್ಪಂದದಿಂದ ಅಮೆರಿಕ ಹಾಗೂ ವೆನಿಜುವೆಲ್ಲ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಹೇಳಿದ್ದಾರೆ.

ವಿಶ್ವದ ಅತ್ಯಂತ ದೊಡ್ಡ ತೈಲ ಒಪ್ಪಂದ

ಟ್ರುತ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್ ಈ ಒಪ್ಪಂದವು ನಮ್ಮ ದೇಶದ ತೈಲ ಪೂರೈಕೆಯನ್ನು ದುಪ್ಪಟ್ಟು ಮಾಡಲಿದೆ. ಜತೆಗೆ ಭವಿಷ್ಯದಲ್ಲಿ ದೇಶದ ಅನಿಲ ಬೆಲೆಗಳನ್ನ ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಹೇಳಿದ್ದು, ಇದು ವಿಶ್ವದಲ್ಲೇ ಅತ್ಯಂತ ದೊಡ್ಡ ಐತಿಹಾಸಿಕ ತೈಲ ಒಪ್ಪಂದ ಎಂದು ವರ್ಣಿಸಿದ್ದಾರೆ.

ಇದನ್ನೂ ಓದಿ:

ಅಮೆರಿಕ ವೆನಿಜುವೆಲ್ಲದ ಮೇಲೆ ಹಿಡಿತ ಸಾಧಿಸೋದಕ್ಕೆ ಈ ತೈಲ ಸಂಗ್ರಹಣೆ ಮುಖ್ಯ ಕಾರಣ. ಯಾಕಂದ್ರೆ ವೆನಿಜುವೆಲ್ಲ ವಿಶ್ವದಲ್ಲಿ ಅತಿ ದೊಡ್ಡ ಕಚ್ಚಾ ತೈಲ ಸಂಗ್ರಹ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಆದರೂ ಮೂಲ ಸೌಕರ್ಯಗಳ ಕೊರತೆ ಹಾಗೂ ಹಲವು ಕಾರಣಗಳಿಂದ ವೆನಿಜುವೆಲ್ಲದಲ್ಲಿ ತೈಲ ಉತ್ಪಾದನೆ ಅತ್ಯಂತ ಕಡಿಮೆಯಾಗಿತ್ತು ಆದರೆ ಈಗ ಅಮೆರಿಕ ಜತೆಗಿನ ಒಪ್ಪಂದದಿಂದಾಗಿ ತೈಲ ಸಂಗ್ರಹಣೆ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎನ್ನಲಾಗಿದೆ.

ಇನ್ನು ಅಧಿಕೃತವಾಗಿ ಖಚಿತಪಡಿಸದ ವೆನಿಜುವೆಲ್ಲ

ಒಪ್ಪಂದದ ಬಗ್ಗೆ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದರೂ, ವೆನಿಜುವೆಲ್ಲ ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಒಟ್ಟಾರೆ ವೆನಿಜುವೆಲ್ಲದ ತೈಲ ಸಂಪತ್ತಿನ ಮೇಲೆ ಅಮೆರಿಕದ ಪ್ರಭಾವ ಹೆಚ್ಚಿಸುವುದರ ಜೊತೆಗೆ ಎರಡು ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧಗಳಲ್ಲಿ ಮಹತ್ವದ ಬದಲಾವಣೆಗಳು ನಡೆಯುವುದಂತು ಖಚಿತ.

Must Read