October 16, 2026
Friday, October 16, 2026
spot_img

ಈ ಯುದ್ಧದಿಂದ ನನ್ನ ಮಗನ ಮದುವೆಗೆ ಹೋಗೋಕೂ ಆಗ್ತಾ ಇಲ್ಲ: ಬೇಸರಿಸಿಕೊಂಡ ಟ್ರಂಪ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಈ ಯುದ್ಧದಿಂದಾಗಿ ನನ್ನ ಮಗನ ಮದುವೆಗೆ ಹೋಗೋಕೆ ಆಗ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೇಸರಿಸಿಕೊಂಡಿದ್ದಾರೆ.

48 ವರ್ಷದ ಡೊನಾಲ್ಡ್ ಟ್ರಂಪ್ ಜೂನಿಯರ್ ಈ ವಾರದ ಕೊನೆಯಲ್ಲಿ ಎರಡನೇ ಮದುವೆ ಆಗ್ತಿದ್ದಾರೆ. ಈ ಮದುವೆಗೆ ನಾನು ಹೋಗೋಕೆ ಆಗ್ತಿಲ್ಲ ಇದೆಂಥಾ ಕೆಟ್ಟ ಘಳಿಗೆ ಎಂದು ಟ್ರಂಪ್‌ ಹೇಳಿದ್ದಾರೆ.

ಡೊನಾಲ್ಡ್‌ ಟ್ರಂಪ್‌ ಜ್ಯೂನಿಯರ್‌ ಬಹಾಮಾಸ್‌ನಲ್ಲಿ ಬೆಟ್ಟಿನಾ ಆಂಡರ್‌ಸನ್‌ ಅವರನ್ನು ಮದುವೆ ಆಗಲಿದ್ದಾರೆ. ಇತ್ತ ಟ್ರಂಪ್‌ ಇರಾನ್‌ ಜೊತೆ ಯುದ್ಧವನ್ನು ಕೊನೆಗೊಳಿಸೋದಕ್ಕೆ ಡಾಕ್ಯುಮೆಂಟ್ಸ್‌ ರೆಡಿ ಮಾಡ್ತಿದ್ದಾರೆ ಎನ್ನಲಾಗಿದೆ.

ನಾನು ಅವರ ಮದುವೆಗೆ ಹೋಗಿ ಆಶೀರ್ವಾದ ಮಾಡಬೇಕು ಅನ್ನೋದು ಅವರ ಇಷ್ಟ.ಆದರೆ ಪರಿಸ್ಥಿತಿ ಹೇಗಿರುತ್ತದೋ ಹಾಗೆ ನಡೆದುಕೊಳ್ಳಬೇಕು. ಇದು ಮದುವೆಗೆ ಹೋಗೋಕೆ ಸೂಕ್ತ ಸಮಯ ಅಲ್ಲ. ಇಂಥ ಗಂಭೀರ ಸಮಸ್ಯೆ ಎದುರಿಗೆ ಇರುವಾಗ ನಾನು ಮದುವೆಗೆ ಹೋದರೆ ಮೀಡಿಯಾಗಳು ಅದನ್ನು ಹೇಗೆ ವರದಿ ಮಾಡುತ್ತಾರೆ ಅಂತ ಗೊತ್ತು. ಆದರೆ ಪ್ರಯತ್ನ ಮಾಡುತ್ತೇನೆ, ಮಗನ ಮದುವೆ ನಾನು ಹೋಗಲಿ ಬಿಡಲಿ ಚೆನ್ನಾಗಿ ಆಗುತ್ತದೆ ಎಂದಿದ್ದಾರೆ.

Must Read