July 22, 2026
Wednesday, July 22, 2026
spot_img

ಜೆನೆರಿಕ್ ಔಷಧಗಳ ಆಮದಿಗೆ ಟ್ರಂಪ್ ಶಾಕ್: ಶೇ. 200 ರಷ್ಟು ಭಾರಿ ಸುಂಕ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶೀಯ ಔಷಧ ಉತ್ಪಾದನಾ ವಲಯವನ್ನು ಉತ್ತೇಜಿಸಲು ಆಮದು ಮಾಡಿಕೊಳ್ಳುವ ಜೆನೆರಿಕ್ ಔಷಧಿಗಳ (Generic Drugs) ಮೇಲೆ ಹಂತ-ಹಂತವಾಗಿ ಭಾರಿ ಸುಂಕ (Tariff) ಹೆಚ್ಚಿಸುವ ಹೊಸ ಕಾರ್ಯತಂತ್ರವನ್ನು ಘೋಷಿಸಿದ್ದಾರೆ. ತಮ್ಮ ‘ಟ್ರೂತ್ ಸೋಶಿಯಲ್’ (Truth Social) ಖಾತೆಯಲ್ಲಿ ಈ ವಿಷಯ ಹಂಚಿಕೊಂಡಿರುವ ಅವರು, ವಿದೇಶಿ ಕಂಪನಿಗಳ ಮೇಲಿನ ಅವಲಂಬನೆ ತಗ್ಗಿಸುವುದು ಸರ್ಕಾರದ ಪ್ರಮುಖ ಆದ್ಯತೆ ಎಂದಿದ್ದಾರೆ.

ಹಂತ-ಹಂತವಾಗಿ ಸುಂಕ ಏರಿಕೆ

  • ಆಗಸ್ಟ್ 1, 2026 ರಿಂದ: ಮುಂದಿನ 2 ವರ್ಷಗಳ ಕಾಲ (2028ರ ವರೆಗೆ) ಆಮದು ಜೆನೆರಿಕ್ ಔಷಧಿಗಳ ಮೇಲೆ 0% ಸುಂಕ ಇರಲಿದೆ.
  • ಆಗಸ್ಟ್ 2028 ರಿಂದ: ಮುಂದಿನ ಒಂದು ವರ್ಷದ ಅವಧಿಗೆ 100% ತೆರಿಗೆ ಜಾರಿಗೆ ಬರಲಿದೆ.
  • ತದನಂತರ: ಆಮದು ಔಷಧಿಗಳ ಮೇಲೆ ನೇರವಾಗಿ 200% ಸುಂಕ ವಿಧಿಸಲಾಗುತ್ತದೆ.

ದಂಡದ ಮಾದರಿಯಲ್ಲಿ ನಿರ್ಧಾರ

ಅಮೆರಿಕದಲ್ಲಿಯೇ ಔಷಧ ನಿರ್ಮಾಣ ಘಟಕಗಳು ಮತ್ತು ಮೂಲಸೌಕರ್ಯಗಳನ್ನು ಸ್ಥಾಪಿಸದ ಕಂಪನಿಗಳಿಗೆ ಈ ಸುಂಕವು ದಂಡದ ರೂಪದಲ್ಲಿ ಪರಿಣಮಿಸಲಿದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಸದ್ಯ ಅಮೆರಿಕದಾದ್ಯಂತ ಹೊಸ ಉತ್ಪಾದನಾ ಘಟಕಗಳು ವೇಗವಾಗಿ ನಿರ್ಮಾಣಗೊಳ್ಳುತ್ತಿದ್ದು, ನೀಡಲಾದ ಕಾಲಾವಕಾಶದಲ್ಲಿ ಕಂಪನಿಗಳು ದೇಶದಲ್ಲೇ ಉತ್ಪಾದನೆ ಆರಂಭಿಸಬೇಕು ಎಂಬುದು ಅಮೆರಿಕ ಸರ್ಕಾರದ ಸ್ಪಷ್ಟ ಸಂದೇಶವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !