August 21, 2026
Friday, August 21, 2026
spot_img

ಮಾಸ್ಕೋದಲ್ಲಿ ಸಾವುನೋವು ಸೃಷ್ಟಿಸಿದ ಉಕ್ರೇನ್‌ ದಾಳಿ: ಬಲಿಯಾದವರ ಪಟ್ಟಿಯಲ್ಲಿ ಭಾರತೀಯ ಪ್ರಜೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ಮಾಸ್ಕೋ ಮೇಲೆ ಉಕ್ರೇನ್ ರಾತ್ರೋರಾತ್ರಿ ನಡೆಸಿದ 500ಕ್ಕೂ ಹೆಚ್ಚು ಡ್ರೋನ್‌ ದಾಳಿಯಲ್ಲಿ ಭಾರತೀಯ ಕಾರ್ಮಿಕ ಸಹಿತ ನಾಲ್ವರು ಮೃತಪಟ್ಟಿದ್ದಾರೆ.

ಭಾರತೀಯ ಕಾರ್ಮಿಕ ಸಾವು

ಈ ಕುರಿತು ರಷ್ಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಮಾಹಿತಿ ನೀಡಿದ್ದು, ಇಂದು ಮುಂಜಾನೆ ಮಾಸ್ಕೋ ಪ್ರದೇಶದಲ್ಲಿ ನಡೆದ ಡ್ರೋನ್ ದಾಳಿಯಲ್ಲಿ ಒಬ್ಬ ಭಾರತೀಯ ಕಾರ್ಮಿಕ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಅಧಿಕಾರಿಗಳು ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಇದೇ ವೇಳೆ ಸಾವನ್ನಪ್ಪಿದ ಕಾರ್ಮಿಕನಿಗೆ ಸಂತಾಪ ಸೂಚಿಸಿದ ರಾಯಭಾರ ಕಚೇರಿಯು, ಕಾರ್ಮಿಕರಿಗೆ ಅಗತ್ಯ ನೆರವು ನೀಡಲು ಕಂಪನಿಯ ಆಡಳಿತ ಮಂಡಳಿ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದೆ. ಪ್ರಸುತ್ತ ಸಾವನ್ನಪ್ಪಿರುವ ವ್ಯಕ್ತಿಯ ಗುರುತುಗಳನ್ನು ಬಹಿರಂಗಪಡಿಸಲಾಗಿಲ್ಲ.

ರಷ್ಯಾದ ಅಧಿಕಾರಿಗಳು ಕೂಡ ಸಾವುನೋವುಗಳನ್ನು ದೃಢಪಡಿಸಿದ್ದು, ಮಾಸ್ಕೋ ಪ್ರದೇಶದಲ್ಲಿ ಮೂವರು ಸೇರಿದಂತೆ ದಾಳಿಯಲ್ಲಿ ಕನಿಷ್ಠ ನಾಲ್ಕು ಜನರು ಸಾವನ್ನಪ್ಪಿದ್ದು, ಹಲವಾರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಉಕ್ರೇನಿಯನ್ ಡ್ರೋನ್‌ ಗಳಿಗೆ ತಿರುಗೇಟು ನೀಡಿದ ರಷ್ಯಾ

ಕಳೆದ 24 ಗಂಟೆಗಳಲ್ಲಿ 500ಕ್ಕೂ ಹೆಚ್ಚು ಉಕ್ರೇನಿಯನ್ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೊಂಡಿದೆ. ದಾಳಿಗೆ ಮಾಸ್ಕೋದ ಪ್ರಮುಖ ತೈಲ ಸಂಸ್ಕರಣಾಗಾರ ಹಾಗೂ ವಸತಿ ಕಟ್ಟಡಗಳಿಗೆ ಹಾನಿಯಾಗಿದ್ದು, ರಕ್ಷಣಾ ತಂಡ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !