October 11, 2026
Sunday, October 11, 2026
spot_img

ಆಸ್ಪತ್ರೆಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿ ಎಸ್ಕೇಪ್‌: ಬಾತ್‌ರೂಮ್‌ ಕಿಟಕಿ ಗ್ಲಾಸ್‌ ಪುಡಿಪುಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕಿತ್ಸೆಗೆಂದು ವಿಮ್ಸ್‌ಗೆ ದಾಖಲಾಗಿದ್ದ ವಿಚಾರಣಾಧೀನ ಕೈದಿಯೊಬ್ಬ ಬಾತ್‌ರೂಮ್‌ನ ಗಾಜು ಒಡೆದು ಪರಾರಿಯಾಗಿದ್ದಾನೆ.

ಸೇಮ್‌ ಸಿನಿಮಾಗಳಲ್ಲಿ ತೋರಿಸುವಂತೆಯೇ ಈ ಕೈದಿ ವಾಶ್‌ರೂಮ್‌ಗೆ ಹೋಗ್ತೀನಿ ಎಂದು ಹೇಳಿದ್ದಾನೆ. ವಾಶ್‌ರೂಮ್‌ನಲ್ಲಿರುವ ಕಿಟಕಿಗಳನ್ನು ಒಡೆದು ಅಲ್ಲಿಂದ ಸದ್ದೇ ಇಲ್ಲದಂತೆ ಪರಾರಿಯಾಗಿದ್ದಾನೆ.

ಪೋಕ್ಸೋ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಹರಪನಹಳ್ಳಿ ಮೂಲದ ಅಣ್ಣಪ್ಪ ಪರಾರಿಯಾದ ವ್ಯಕ್ತಿ. ಈತ ಜೈಲಿನಲ್ಲಿ ಮರದಿಂದ ಬಿದ್ದು ಗಾಯಗೊಂಡಿದ್ದ. ಅದಕ್ಕಾಗಿ ಈತನನ್ನು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಿಸಲಾಗಿತ್ತು.

ಇದೀಗ ಆಸ್ಪತ್ರೆಯಿಂದ ಪರಾರಿಯಾದ ಕೈದಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Must Read