June 9, 2026
Tuesday, June 9, 2026
spot_img

ಹಾರ್ಮುಜ್ ಸಮೀಪ ಅಮೆರಿಕದ ಯುದ್ಧ ಹೆಲಿಕಾಪ್ಟರ್ ಪತನ: ಇಬ್ಬರು ಪೈಲಟ್‌ಗಳು ಸೇಫ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಅಮೆರಿಕ ಸೇನೆಗೆ ಮತ್ತೊಂದು ಅನಿರೀಕ್ಷಿತ ಘಟನೆ ಎದುರಾಗಿದೆ. ಹಾರ್ಮುಜ್ ಜಲಸಂಧಿ ಸಮೀಪ ಕಾರ್ಯಾಚರಣೆಯಲ್ಲಿದ್ದ ಎಎಚ್-64 ಅಪಾಚೆ ಯುದ್ಧ ಹೆಲಿಕಾಪ್ಟರ್ ಪತನಗೊಂಡಿದ್ದು, ಘಟನೆಯಿಂದ ಭದ್ರತಾ ವಲಯದಲ್ಲಿ ಆತಂಕ ಮೂಡಿದೆ.

ಅದೃಷ್ಟವಶಾತ್ ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರು ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರತೆಗೆದಿರುವುದಾಗಿ ಅಮೆರಿಕ ಆಡಳಿತ ತಿಳಿಸಿದೆ.

ಕಾರಣದ ಬಗ್ಗೆ ತನಿಖೆ ಆರಂಭ

ಹೆಲಿಕಾಪ್ಟರ್ ಏಕಾಏಕಿ ಕೆಳಗೆ ಬೀಳಲು ಕಾರಣವೇನು ಎಂಬುದು ಇನ್ನೂ ಬಹಿರಂಗವಾಗಿಲ್ಲ. ತಾಂತ್ರಿಕ ವೈಫಲ್ಯವೇ ಅಥವಾ ಹೊರಗಿನ ಪ್ರಭಾವವೇ ಎಂಬ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಮಧ್ಯೆ ಈ ಅವಘಡ ಸಂಭವಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಇದನ್ನೂ ಓದಿ:

ಅಮೆರಿಕ ಸೇನೆಯ ಪ್ರಮುಖ ಅಸ್ತ್ರ

ಅಪಾಚೆ ಹೆಲಿಕಾಪ್ಟರ್ ಅಮೆರಿಕದ ಅತ್ಯಾಧುನಿಕ ಯುದ್ಧ ಸಾಧನಗಳಲ್ಲಿ ಒಂದಾಗಿದೆ. ಕ್ಷಿಪಣಿ ದಾಳಿ ಹಾಗೂ ಭೂ ಕಾರ್ಯಾಚರಣೆಗಳಿಗೆ ಬಳಸಲಾಗುವ ಈ ಹೆಲಿಕಾಪ್ಟರ್ ಹಲವು ಯುದ್ಧ ಮಿಷನ್‌ಗಳಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾರ್ಮುಜ್ ಪ್ರದೇಶದಲ್ಲಿನ ಭದ್ರತಾ ಕಾರ್ಯಾಚರಣೆಗಳಲ್ಲಿಯೂ ಇದರ ಬಳಕೆ ನಡೆಯುತ್ತಿತ್ತು.

ಒಪ್ಪಂದದ ನಿರೀಕ್ಷೆ ವ್ಯಕ್ತಪಡಿಸಿದ ಟ್ರಂಪ್

ಘಟನೆ ಕುರಿತು ಸಂಪೂರ್ಣ ವರದಿ ಸಿದ್ಧಪಡಿಸಲು ಸೂಚಿಸಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮಾತುಕತೆಗಳು ಫಲ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಮಹತ್ವದ ಬೆಳವಣಿಗೆಗಳು ಸಂಭವಿಸಬಹುದು ಎಂದು ಅವರು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !