ಅಡುಗೆ ಎಣ್ಣೆಯ ಬೆಲೆ ದಿನದಿಂದ ದಿನ ಗಗನಕ್ಕೆ ಏರುತ್ತಲೆ ಇದೆ. ಹಾಗಾಗಿ. ಎಣ್ಣೆಯನ್ನು ವೇಸ್ಟ್ ಮಾಡಲು ಯಾರಿಗೂ ಮನಸಾಗುವುದಿಲ್ಲಿ. ಆದ್ದರಿಂದ ಎಲ್ಲಾರೂ ಒಮ್ಮೆ ಬಳಸಿದ ಅಥವಾ ಪಕೋಡ, ಬೋಂಡ, ಜಾಮೂನ್, ಪೂರಿ ಇಂತಹ ತಿಂಡಿಗಳನ್ನು ಕರಿಯಲು ಬಳಿಸಿದ ಎಣ್ಣೆಯನ್ನು ಮತ್ತೆ ಮತ್ತೆ ಬಳಸುತ್ತಾರೆ. ಇದು ಎಷ್ಟು ಸರಿ, ಇದರಿಂದ ನಮ್ಮ ಆರೋಗ್ಯದ ಮೇಲೆ ಯಾವೆಲ್ಲಾ ಪರಿಣಾಮಗಳು ಬೀರುತ್ತವೆ ಎಂಬುದು ನಿಮಗೆ ಗೊತ್ತಾ?
ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮತ್ತೆ ಮತ್ತೆ ಬಳಸಿದರೆ, ಕ್ಯಾನ್ಸರ್ ಅಪಾಯವು ಹೆಚ್ಚಿರುತ್ತದೆ. ವಾಸ್ತವವಾಗಿ, ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವ ಮೂಲಕ, ರಾಡಿಕಲ್ಗಳು ಹೆಚ್ಚಾಗುತ್ತದೆ. ಇದರೊಂದಿಗೆ, ಅದರ ಎಲ್ಲಾ ಆಂಟಿ-ಆಕ್ಸಿಡೆಂಟ್‌ಗಳು ಸಹ ನಾಶವಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಕ್ಯಾನ್ಸರ್ ಅಂಶಗಳು ಅದರಲ್ಲಿ ಬೆಳೆಯಲು ಪ್ರಾರಂಭಿಸುತ್ತವೆ.
ಬಳಸಿದ ಎಣ್ಣೆಯನ್ನು ಹೆಚ್ಚಿನ ಉರಿಯಲ್ಲಿ ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿರುವ ಕೊಬ್ಬನ್ನು ಟ್ರಾನ್ಸ್ ಫ್ಯಾಟ್‌ಗಳಾಗಿ ಪರಿವರ್ತಿಸುತ್ತದೆ, ಇದು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು.
ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡದರೆ ಅದು ಹೊಟ್ಟೆಯ ಹುಣ್ಣುಗಳು, ಆಮ್ಲೀಯತೆಗೆ ಕಾರಣವಾಗಬಹುದು. ಇಷ್ಟೇ ಅಲ್ಲ, ಮಲಬದ್ಧತೆ ಮತ್ತು ಅತಿಸಾರದಂತಹ ಸಮಸ್ಯೆಗಳು ಕೂಡ ಬರಬಹುದು.
ಉಳಿದ ಎಣ್ಣೆಯಿಂದ ಮಾಡಿದ ಆಹಾರವನ್ನು ಸೇವಿಸಿದರೆ, ನೀವು ಮಧುಮೇಹಕ್ಕೆ ಬಲಿಯಾಗಬಹುದು ಹಾಗೂ ಅತಿಯಾದ ಬೊಜ್ಜು ಬರಲು ಇದು ಕಾರಣವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಬಳಸಿದ ಎಣ್ಣೆಯನ್ನು ಬಳಸುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಒಳ್ಳೆಯದು.
ಕರಿದ ಎಣ್ಣೆಯನ್ನು ಮರುಬಳಕೆ ಮಾಡುವುದರಿಂದ ರಕ್ತದೊತ್ತಡದ ಸಮಸ್ಯೆ ಉಂಟಾಗಬಹುದು. ಎಣ್ಣೆಯಲ್ಲಿ ಮುಕ್ತ ಕೊಬ್ಬಿನಾಮ್ಲಗಳು ಮತ್ತು ರಾಡಿಕಲ್ಗಳು ಬಿಡುಗಡೆಯಾಗುವುದರಿಂದ ರಕ್ತದೊತ್ತಡದಂತಹ ಸಮಸ್ಯೆಗಳು ಕಾಡಬಹುದು.



