October 10, 2026
Saturday, October 10, 2026
spot_img

ಫೀಲ್ಡ್‌ಗೆ ಬರೋಕೂ ಮುಂಚೆ ಕಾರ್ಟೂನ್‌ ನೋಡ್ಕೊಂಡು ಬರ್ತಾರಂತೆ ವೈಭವ್‌ ಸೂರ್ಯವಂಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬರೀ 15 ವರ್ಷಕ್ಕೇ ಅದ್ಭುತ ಪ್ರದರ್ಶನ ನೀಡುತ್ತಿರುವ ಬ್ಯಾಟರ್‌ ವೈಭರ್‌ ಸೂರ್ಯವಂಶಿ ಫೀಲ್ಡ್‌ಗೆ ಬರೋ ಮುನ್ನ ಒಂದು ಕಾರ್ಟೂನ್‌ ನೋಡ್ಕೊಂಡು ಬರ್ತಾರಂತೆ!

ಹೌದು, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತೆ ಫೀಲ್ಡ್‌ಗೆ ಕಾಲಿಟ್ಟ ಮೇಲೆ ಮ್ಯಾಜಿಕ್‌ ಮಾಡೋ ಸೂರ್ಯವಂಶಿಗೆ ಒತ್ತಡವೇ ಇಲ್ಲವಂತೆ. ಗಮನವೆಲ್ಲಾ ಮ್ಯಾಚ್‌ ಮೇಲೆ ಇದ್ದರೂ ಕೂಲ್‌ ಆಗಿ ಕಾರ್ಟೂನ್‌ ನೋಡ್ಕೊಂಡು ಕೂತಿರ್ತಾರಂತೆ.

ನಿಮ್ಮ ವಯಸ್ಸಿನ ಮಕ್ಕಳು ಮನೆಯಲ್ಲಿ ಕಾರ್ಟೂನ್‌ ನೋಡ್ಕೊಂಡು ಕೂತಿರ್ತಾರೆ ಆದರೆ ನೀವು ಇಲ್ಲಿ ದೊಡ್ಡ ದೊಡ್ಡ ಬೌಲರ್‌ಗಳ ಬೆವರಿಳಿಸ್ತಾ ಇದ್ದೀರಿ. ಇದೆಲ್ಲ ಹೇಗೆ ಸಾಧ್ಯ? ಅಷ್ಟು ದೊಡ್ಡ ಹೆಸರರಿರುವ ಪ್ಲೇಯರ್ಸ್‌ ಫೇಸ್‌ ಮಾಡೋದಕ್ಕೆ ಭಯ ಆಗೋದಿಲ್ವಾ? ಎಂದು ರಿಪೋರ್ಟ್‌ರ್‌ ಒಬ್ಬರು ಪ್ರಶ್ನಿಸಿದ್ದಾರೆ.

ನನ್ನ ತಲೆಲಿ ಮ್ಯಾಚ್‌, ಪ್ಲೇಯರ್ಸ್‌ ಯಾರಿದ್ದಾರೆ ಅನ್ನೋ ಒತ್ತಡವೇ ಇರೋದಿಲ್ಲ. ಮ್ಯಾಚ್‌ಗೂ ಮುನ್ನ ನನ್ನನ್ನು ಯಾರಾದ್ರೂ ಕರೆಯೋವರೆಗೂ ಕಾರ್ಟೂನ್‌ ನೋಡ್ಕೊಂಡು ಕೂತಿರ್ತೀನಿ. ಆದರೆ ನನ್ನ ಗಮನ ಮ್ಯಾಚ್‌ ಮೇಲೆ ಇರುತ್ತದೆ ಎಂದಿದ್ದಾರೆ.

Must Read