June 16, 2026
Tuesday, June 16, 2026
spot_img

VASTU| ರಾತ್ರಿ ಅಡುಗೆ ಮನೆಯಲ್ಲಿ ಈ ತಪ್ಪುಗಳನ್ನು ಮಾಡಿದರೆ ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾಳೆ, ಎಚ್ಚರ!

ವಾಸ್ತುಶಾಸ್ತ್ರದಲ್ಲಿ ಅಡುಗೆ ಮನೆಗೆ ವಿಶೇಷ ಸ್ಥಾನವಿದೆ. ಇದು ಕೇವಲ ಆಹಾರ ತಯಾರಿಸುವ ಜಾಗವಲ್ಲ, ಮನೆಯ ಆರ್ಥಿಕ ಪ್ರಗತಿ ಮತ್ತು ಆರೋಗ್ಯವನ್ನು ನಿರ್ಧರಿಸುವ ಕೇಂದ್ರ ಬಿಂದು. ಅಡುಗೆ ಮನೆಯು ನೆಗೆಟಿವ್ ಎನರ್ಜಿಯಿಂದ ಮುಕ್ತವಾಗಿರಬೇಕು. ಅದರಲ್ಲೂ ಮುಖ್ಯವಾಗಿ ರಾತ್ರಿ ವೇಳೆ ಅಡುಗೆ ಮನೆಯಲ್ಲಿ ನಾವು ಮಾಡುವ ಕೆಲವು ಸಣ್ಣ ತಪ್ಪುಗಳು ದೊಡ್ಡ ವಾಸ್ತು ದೋಷಕ್ಕೆ ಕಾರಣವಾಗಿ, ಮನೆಯಲ್ಲಿ ದರಿದ್ರತನ ತರಬಹುದು. ಹಾಗಾಗಿ ರಾತ್ರಿ ಮಲಗುವ ಮುನ್ನ ಅಡುಗೆ ಮನೆಯಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂಬರ ಬಗ್ಗೆ ತಿಳಿಯೋಣ.

ಎಂಜಲು ಪಾತ್ರೆಗಳನ್ನು ಸಿಂಕ್‌ನಲ್ಲಿ ಇಡುವುದು

ರಾತ್ರಿ ಊಟವಾದ ನಂತರ ಪಾತ್ರೆಗಳನ್ನು ತೊಳೆಯದೆ ಸಿಂಕ್‌ನಲ್ಲಿ ಹಾಗೆಯೇ ಬಿಡುವುದು ಅತ್ಯಂತ ದೊಡ್ಡ ವಾಸ್ತು ದೋಷ. ಎಂಜಲು ಪಾತ್ರೆಗಳು ರಾತ್ರಿಯಿಡೀ ಇರುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಹೆಚ್ಚಾಗುತ್ತದೆ. ಇದರಿಂದ ಅನ್ನಪೂರ್ಣೇಶ್ವರಿ ಮತ್ತು ಲಕ್ಷ್ಮೀ ದೇವಿ ಮುನಿಸಿಕೊಳ್ಳುತ್ತಾರೆ ಹಾಗೂ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ. ಆದ್ದರಿಂದ ರಾತ್ರಿ ಮಲಗುವ ಮುನ್ನವೇ ಎಲ್ಲಾ ಪಾತ್ರೆಗಳನ್ನು ತೊಳೆದು ಸಿಂಕ್ ಕ್ಲೀನ್ ಮಾಡಿಡಬೇಕು.

ಗ್ಯಾಸ್ ಸ್ಟೌವ್ ಅಥವಾ ಒಲೆಯನ್ನು ಕೊಳಕಾಗಿ ಬಿಡುವುದು

ಒಲೆಯನ್ನು ಅಗ್ನಿ ದೇವನ ರೂಪ ಎಂದು ಪರಿಗಣಿಸಲಾಗುತ್ತದೆ.  ಅಡುಗೆ ಮಾಡಿದ ನಂತರ ಗ್ಯಾಸ್ ಸ್ಟೌವ್ ಅಥವಾ ಒಲೆಯನ್ನು ಸ್ವಚ್ಛಗೊಳಿಸದೆ ಹಾಗೆಯೇ ಮಲಗುವುದರಿಂದ ಮನೆಯ ಸದಸ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಮತ್ತು ರಾಹು-ಕೇತುಗಳ ದೋಷಕ್ಕೆ ಕಾರಣವಾಗುತ್ತದೆ. ಹಾಗಾಗಿ ರಾತ್ರಿ ಅಡುಗೆ ಮುಗಿದ ತಕ್ಷಣ ಒಲೆ ಮತ್ತು ಅದರ ಸುತ್ತಮುತ್ತಲಿನ ಜಾಗವನ್ನು ಒರೆಸಿ ಸ್ವಚ್ಛವಾಗಿಡಬೇಕು.

ಅಡುಗೆ ಮನೆಯನ್ನು ಕತ್ತಲಲ್ಲಿಡುವುದು

ರಾತ್ರಿ ಕೆಲಸ ಮುಗಿದ ತಕ್ಷಣ ಅಡುಗೆ ಮನೆಯ ಲೈಟ್‌ಗಳನ್ನು ಸಂಪೂರ್ಣವಾಗಿ ಆಫ್ ಮಾಡಿ ದಟ್ಟ ಕತ್ತಲು ಮಾಡುವುದು ಸರಿಯಲ್ಲ. ಕತ್ತಲಿರುವ ಜಾಗದಲ್ಲಿ ನೆಗೆಟಿವ್ ಎನರ್ಜಿ ಬೇಗನೆ ಆವರಿಸುತ್ತದೆ. ಇದು ಮನೆಯಲ್ಲಿ ಅಶಾಂತಿ ಮತ್ತು ಧನಹಾನಿಗೆ ಕಾರಣವಾಗಬಹುದು. ಹಾಗಾಗಿ ಅಡುಗೆ ಮನೆಯಲ್ಲಿ ರಾತ್ರಿಯಿಡೀ ಒಂದು ಸಣ್ಣ ಜೀರೋ ವಾಟ್ ಬಲ್ಬ್ ಅಥವಾ ಡಿಮ್ ಲೈಟ್ ಉರಿಯುವಂತೆ ನೋಡಿಕೊಳ್ಳಬೇಕು.

ಖಾಲಿ ನೀರಿನ ಪಾತ್ರೆಗಳು

ರಾತ್ರಿ ಅಡುಗೆ ಮನೆಯಲ್ಲಿ ನೀರಿಡುವ ಪಾತ್ರೆಗಳು ಅಥವಾ ಹಂಡೆಗಳನ್ನು ಸಂಪೂರ್ಣವಾಗಿ ಖಾಲಿ ಇಡುವುದು ಒಳ್ಳೆಯದಲ್ಲ. ಖಾಲಿ ನೀರಿನ ಪಾತ್ರೆಗಳು ಮನೆಯಲ್ಲಿ ಸಂಪತ್ತಿನ ಕೊರತೆಯನ್ನು ಬಿಂಬಿಸುತ್ತವೆ. ಇದರಿಂದ ಭಾಗ್ಯ ಕೈಕೊಡಬಹುದು. ಹಾಗಾಗಿ ರಾತ್ರಿ ಮಲಗುವ ಮುನ್ನ ನೀರಿಡುವ ಪಾತ್ರೆಗಳಲ್ಲಿ ಕನಿಷ್ಠ ಅರ್ಧದಷ್ಟಾದರೂ ನೀರನ್ನು ತುಂಬಿಸಿ ಇಡಬೇಕು.

ಇದನ್ನೂ ಓದಿ:

ಕಸದ ಬುಟ್ಟಿ ತೆರೆದಿಡುವುದು

ಅಡುಗೆ ಮನೆಯ ಕಸದ ಬುಟ್ಟಿಯನ್ನು ರಾತ್ರಿ ವೇಳೆ ತೆರೆದಿಡುವುದು ಅಥವಾ ತರಕಾರಿ ಸಿಪ್ಪೆ ಇತ್ಯಾದಿ ಕಸವನ್ನು ಅಡುಗೆ ಮನೆಯಲ್ಲೇ ಮುಚ್ಚದೆ ಬಿಡುವುದು ಕೇವಲ ವಾಸ್ತು ದೋಷ ಮಾತ್ರವಲ್ಲ, ಆರೋಗ್ಯಕ್ಕೂ ಹಾನಿಕರ. ದುರ್ವಾಸನೆ ಮತ್ತು ಜಿರಳೆಗಳು ಮನೆಯಲ್ಲಿ ನೆಗೆಟಿವ್ ವೈಬ್ರೇಷನ್ ಸೃಷ್ಟಿಸುತ್ತವೆ. ಹಾಗಾಗಿ ಕಸದ ಬುಟ್ಟಿಗೆ ಕಡ್ಡಾಯವಾಗಿ ಮುಚ್ಚಳ ಇರಲಿ ಅಥವಾ ರಾತ್ರಿ ಮಲಗುವ ಮುನ್ನ ಕಸವನ್ನು ಮನೆಯಿಂದ ಹೊರಗೆ ಹಾಕಬೇಕು.

ಉಪ್ಪು ಮತ್ತು ಹಾಲನ್ನು ಮುಚ್ಚದೆ ಇಡುವುದು

ಉಪ್ಪು ಮತ್ತು ಹಾಲು ಚಂದ್ರ ಹಾಗೂ ಲಕ್ಷ್ಮಿಗೆ ಸಂಬಂಧಿಸಿದ್ದಾಗಿದೆ. ಅಡುಗೆ ಮನೆಯಲ್ಲಿ ಉಪ್ಪಿನ ಡಬ್ಬಿ ಅಥವಾ ಹಾಲಿನ ಪಾತ್ರೆಯನ್ನು ರಾತ್ರಿ ವೇಳೆ ಮುಚ್ಚದೆ ತೆರೆದಿಡುವುದರಿಂದ ದೃಷ್ಟಿ ದೋಷ ಅಥವಾ ನೆಗೆಟಿವ್ ಎನರ್ಜಿ ಬೇಗನೆ ಆಕರ್ಷಿತವಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !