July 24, 2026
Friday, July 24, 2026
spot_img

ಮಾತೃತ್ವದ ಬಳಿಕ ಮತ್ತೆ ಟ್ರ್ಯಾಕ್ ಹಿಡಿದ ವಿನೇಶ್‌ಗೆ ನ್ಯಾಯಾಲಯದ ಬೆಂಬಲ: ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಿ ಎಂದ ಹೈಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಕುಸ್ತಿ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಪಾಲ್ಗೊಳ್ಳಲು ದೆಹಲಿ ಹೈಕೋರ್ಟ್ ಅನುಮತಿ ನೀಡಿದೆ.

ಮಾತೃತ್ವ ವಿರಾಮದ ಬಳಿಕ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದ ವಿನೇಶ್ ಪರವಾಗಿ ನ್ಯಾಯಾಲಯ ನೀಡಿದ ಈ ಆದೇಶ ಇದೀಗ ಕ್ರೀಡಾ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

WFI ನೀತಿಗೆ ಹೈಕೋರ್ಟ್ ಅಸಮಾಧಾನ

ಭಾರತೀಯ ಕುಸ್ತಿ ಒಕ್ಕೂಟದ ಆಯ್ಕೆ ನೀತಿಯನ್ನು ಪರಿಶೀಲಿಸಿದ ನ್ಯಾಯಾಲಯ, ಅದು ಕೆಲವು ಕ್ರೀಡಾಪಟುಗಳನ್ನು ಅನ್ಯಾಯವಾಗಿ ಹೊರಗಿಡುವ ರೀತಿಯಲ್ಲಿದೆ ಎಂದು ಅಭಿಪ್ರಾಯಪಟ್ಟಿತು. ಮಾತೃತ್ವದ ಬಳಿಕ ಮರಳುವ ಮಹಿಳಾ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ಯಾವುದೇ ಸ್ಪಷ್ಟ ವಿಧಾನ ಇಲ್ಲದಿರುವುದನ್ನು ನ್ಯಾಯಪೀಠ ಪ್ರಶ್ನಿಸಿತು.

ಇದನ್ನೂ ಓದಿ:

ಟ್ರಯಲ್ಸ್‌ಗೆ ವಿಶೇಷ ಸೂಚನೆ

ಮುಖ್ಯ ನ್ಯಾಯಮೂರ್ತಿ ಡಿ.ಕೆ ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕರಿಯಾ ಅವರ ಪೀಠ, ಮೇ 30 ಮತ್ತು 31ರಂದು ನಡೆಯುವ ಟ್ರಯಲ್ಸ್‌ಗಳನ್ನು ಸಂಪೂರ್ಣವಾಗಿ ವೀಡಿಯೊ ದಾಖಲೆ ಮಾಡಬೇಕು ಎಂದು ಸೂಚಿಸಿದೆ. ಜೊತೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ ಹಾಗೂ ಭಾರತೀಯ ಒಲಿಂಪಿಕ್ ಸಂಸ್ಥೆಯಿಂದ ಸ್ವತಂತ್ರ ವೀಕ್ಷಕರ ಹಾಜರಾತಿಯನ್ನೂ ಕಡ್ಡಾಯಗೊಳಿಸಿದೆ.

ಒಲಿಂಪಿಕ್ಸ್ ಅನರ್ಹತೆ ಬಳಿಕ ಹೊಸ ಅವಕಾಶ

ಪ್ಯಾರಿಸ್ ಒಲಿಂಪಿಕ್ಸ್ ವೇಳೆ 100 ಗ್ರಾಂ ಅಧಿಕ ತೂಕದ ಕಾರಣ ವಿನೇಶ್ ಫೋಗಟ್ ಫೈನಲ್‌ನಿಂದ ಅನರ್ಹಗೊಂಡಿದ್ದರು. ಇದೀಗ ನ್ಯಾಯಾಲಯದ ಆದೇಶದಿಂದ ಅವರಿಗೆ ಮತ್ತೊಮ್ಮೆ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಂತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !