October 15, 2026
Thursday, October 15, 2026
spot_img

ಯುದ್ಧ ಅಂದ್ರೆ ಯುದ್ಧವೇ, ಮಾತುಕತೆ ನಿಲ್ಲದು: ಇರಾನ್ ದಾಳಿಗೆ ಟ್ರಂಪ್ ಖಡಕ್ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಅತ್ಯಾಧುನಿಕ ಎಫ್-35 ಸ್ಟೆಲ್ತ್ ಫೈಟರ್ ಜೆಟ್ ಸೇರಿದಂತೆ ಐದು ಪ್ರಮುಖ ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಿರುವುದಾಗಿ ಇರಾನ್ ಮಾಡಿರುವ ಪ್ರತಿಪಾದನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಒಂದೇ ದಿನದಲ್ಲಿ ಎಫ್-35, ಎಫ್-10, ಎಫ್-15ಇ ಜೆಟ್, ಯುಹೆಚ್ 60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಮತ್ತು ‘ಯುದ್ಧದೊರೆ’ ಎಂದೇ ಹೆಸರಾದ ಹೆಚ್‌ಸಿ-130ಜೆ ವಿಮಾನಗಳನ್ನು ಧ್ವಂಸಗೊಳಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಟ್ರಂಪ್, “ಸದ್ಯದ ಪರಿಸ್ಥಿತಿ ಸಂಕೀರ್ಣವಾಗಿದೆ. ನಾವು ಯುದ್ಧದ ಮೈದಾನದಲ್ಲಿದ್ದೇವೆ. ಈ ದಾಳಿಗಳು ಇರಾನ್ ಜೊತೆಗಿನ ರಾಜತಾಂತ್ರಿಕ ಮಾತುಕತೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,” ಎಂದು ಸ್ಪಷ್ಟಪಡಿಸಿದ್ದಾರೆ.

ಮಿಲಿಟರಿ ಕಾರ್ಯಾಚರಣೆ ಮತ್ತು ರಾಜತಾಂತ್ರಿಕ ಪ್ರಯತ್ನಗಳು ಏಕಕಾಲದಲ್ಲಿ ಸಾಗುತ್ತಿವೆ ಎಂದ ಅವರು, ವಿಮಾನಗಳ ಶೋಧ ಕಾರ್ಯ ಅಥವಾ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

Must Read