August 19, 2026
Wednesday, August 19, 2026
spot_img

ಮಾತುಕತೆಗೆ ಯಾರೂ ಉಳಿಯಲ್ಲ ಅಂತ ಸುಮ್ಮನಿದ್ದೀವಿ! ಇರಾನ್‌ಗೆ ಟ್ರಂಪ್ ವ್ಯಂಗ್ಯಭರಿತ ಎಚ್ಚರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ. ‘ಆಕ್ಸಿಯಾಸ್’ ಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಅಂತ್ಯಕ್ರಿಯೆಗಾಗಿ ಇರಾನ್‌ನ ಉನ್ನತ ನಾಯಕರೆಲ್ಲರೂ ಒಂದೇ ಕಡೆ ಸೇರಿದ್ದಾರೆ. ಅಮೆರಿಕ ಮನಸ್ಸು ಮಾಡಿದರೆ ಒಂದೇ ಒಂದು ದಾಳಿಯ ಮೂಲಕ ಇಡೀ ನಾಯಕತ್ವವನ್ನು ಇಲ್ಲದಂತೆ ಮಾಡಬಹುದು. ಆದರೆ, ನಾವು ಹಾಗೆ ಮಾಡುತ್ತಿಲ್ಲ. ಏಕೆಂದರೆ ಆಮೇಲೆ ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅಲ್ಲಿ ಯಾರೂ ಇರುವುದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಇರಾನ್ ಆರ್ಥಿಕತೆ ಕುಸಿತ

ಇತ್ತೀಚಿನ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಹತರಾದ ಬಳಿಕವೂ ಟ್ರಂಪ್ ಒತ್ತಡ ಮುಂದುವರಿಸಿದ್ದಾರೆ. ಅಮೆರಿಕದ ದಿಗ್ಬಂಧನಗಳಿಂದಾಗಿ ಇರಾನ್‌ನಲ್ಲಿ ಆರ್ಥಿಕತೆ ಸಂಪೂರ್ಣ ಕುಸಿದಿದ್ದು, ಹಣದುಬ್ಬರ ಗಗನಕ್ಕೇರಿದೆ. ಈಗ ಅವರು ಒಪ್ಪಂದಕ್ಕಾಗಿ ಹತಾಶರಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. ನಾವು ಒಳ್ಳೆಯವರಾದ್ದರಿಂದ ಅಂತ್ಯಕ್ರಿಯೆ ಮುಗಿಸಲು ಅವರಿಗೆ ಒಂದು ವಾರ ಕಾಲಾವಕಾಶ ನೀಡಿದ್ದೇವೆ ಎಂದೂ ಅವರು ಲೇವಡಿ ಮಾಡಿದ್ದಾರೆ.

ಇರಾನ್ ತೀವ್ರ ಆಕ್ರೋಶ ಮತ್ತು ಎಚ್ಚರಿಕೆ

ಟ್ರಂಪ್ ಅವರ ಈ ಹೇಳಿಕೆಗೆ ಇರಾನ್ ತೀವ್ರ ಆಕ್ರೋಶ ಹೊರಹಾಕಿದೆ. ಅರ್ಮೇನಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯು, “ಅಮೆರಿಕ ಅಧ್ಯಕ್ಷರಿಗೆ ನಾಗರಿಕತೆ, ಇತಿಹಾಸವಾಗಲಿ ಅಥವಾ ಗೌರವವಾಗಲಿ ಇಲ್ಲ” ಎಂದು ಕಿಡಿಕಾರಿದೆ. ಇದೇ ವೇಳೆ ಇರಾನ್ ಸೇನಾ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಯಾವುದೇ ಹೊಸ ಮಿಲಿಟರಿ ತಪ್ಪು ಲೆಕ್ಕಾಚಾರ ನಡೆದರೆ ಅಮೆರಿಕ ಮತ್ತು ಇಸ್ರೇಲ್ ಭೀಕರ ಪ್ರತಿಪ್ರಹಾರ ಎದುರಿಸಬೇಕಾಗುತ್ತದೆ ಎಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !