August 26, 2026
Wednesday, August 26, 2026
spot_img

ಕಣ್ಣೊರೆಸುವ ತಂತ್ರ ನಮಗೆ ಬೇಡ: ಕೇಂದ್ರದ ವಿರುದ್ಧ ಹೋರಾಟ ತೀವ್ರಗೊಳಿಸಿದ ಸಿಜೆಪಿ, ಶಿಕ್ಷಣ ಸಚಿವರ ವಜಾಕ್ಕೆ ಪಟ್ಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ವಿರುದ್ಧ ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಭರವಸೆಯನ್ನು ಕಾಕ್ರೋಚ್ ಜನತಾ ಪಾರ್ಟಿ (CJP) ತಿರಸ್ಕರಿಸಿದೆ. ಈ ಕ್ರಮಗಳು ವ್ಯವಸ್ಥೆಯ ಹೊಣೆಗಾರಿಕೆಯನ್ನು ಮುಚ್ಚಿಹಾಕುವ ಯತ್ನ ಎಂದು ಆಕ್ರೋಶ ಹೊರಹಾಕಿರುವ ಪ್ರತಿಭಟನಾಕಾರರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ದೆಹಲಿಯ ಜಂತರ್ ಮಂತರ್‌ನಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

“ಹಾಯ್, ನನ್ನ ಹೆಸರು ನಥಿಂಗ್”: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

“ನಮ್ಮ ಯುವಕರ ಭವಿಷ್ಯಕ್ಕಿಂತ ಬೇರೇನೂ ಮುಖ್ಯವಲ್ಲ” ಎಂಬ ಪ್ರಧಾನಿ ಮೋದಿಯವರ ಎಕ್ಸ್ (X) ಪೋಸ್ಟ್‌ಗೆ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಸಾಮಾಜಿಕ ಜಾಲತಾಣದಲ್ಲೇ ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಫೋಟೋ ಹಂಚಿಕೊಂಡಿರುವ ಅವರು, “ಹಾಯ್, ನನ್ನ ಹೆಸರು ನಥಿಂಗ್” ಎಂಬ ಕ್ಯಾಪ್ಷನ್ ನೀಡುವ ಮೂಲಕ ಪ್ರಧಾನಿ ಮೋದಿಗೆ ಸಚಿವರೇ ಮುಖ್ಯವಾಗಿದ್ದಾರೆ ಎಂದು ಟೀಕಿಸಿದ್ದಾರೆ. ಇದರೊಂದಿಗೆ “ಧರ್ಮೇಂದ್ರ ಪ್ರಧಾನ್ ತಕ್ಷಣ ರಾಜೀನಾಮೆ ನೀಡಬೇಕು” ಎಂದು ಸಿಜೆಪಿ ಅಧಿಕೃತವಾಗಿ ಒತ್ತಾಯಿಸಿದೆ.

ಗಾಯವಾದ ಮೇಲೆ ಮುಲಾಮು ಹಚ್ಚಿದರೆ ಸಾಕೆ?

ಸಿಜೆಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಮಾತನಾಡಿ, ಪ್ರಧಾನಿಯವರ ಇತ್ತೀಚಿನ ಪ್ರತಿಕ್ರಿಯೆಯನ್ನು ಸ್ವಾಗತಿಸಿದರಾದರೂ, ಇದು ಒಂದೂವರೆ ತಿಂಗಳ ನಿರಂತರ ಪ್ರತಿಭಟನೆಯ ನಂತರ ಬಂದಿರುವ ತಡವಾದ ನಿರ್ಧಾರ ಎಂದಿದ್ದಾರೆ.

“ಪ್ರಧಾನಿಯವರು ಅಂತಿಮವಾಗಿ ತಮ್ಮ ವಿದೇಶಿ ಪ್ರವಾಸಗಳನ್ನು ಮುಗಿಸಿ ಭಾರತದ ವಿದ್ಯಾರ್ಥಿಗಳ ಕಡೆಗೆ ಗಮನ ಹರಿಸಿರುವುದು ಒಳ್ಳೆಯದು. ಆದರೆ ಪೇಪರ್ ಲೀಕ್ ಆದ ಮೇಲೆ ಶಿಕ್ಷೆ ವಿಧಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅಸಲು ಪೇಪರ್ ಲೀಕ್ ಏಕೆ ಆಗುತ್ತಿದೆ? ಎಂಬ ಮೂಲ ಪ್ರಶ್ನೆಗೆ ಸರ್ಕಾರ ಉತ್ತರ ನೀಡುತ್ತಿಲ್ಲ. ಗಾಯವಾದ ಮೇಲೆ ಮುಲಾಮು ಹಚ್ಚುವುದಕ್ಕಿಂತ, ಗಾಯವಾಗದಂತೆ ತಡೆಯುವುದು ಮುಖ್ಯ ಎಂದು ರಂಕಾ ಗುಡುಗಿದ್ದಾರೆ.

ಇದನ್ನೂ ಓದಿ:

ನೇರವಾಗಿ ಪ್ರಧಾನಿ ಮೋದಿಯತ್ತ ತಿರುಗಿದ ಜನಾಕ್ರೋಶ

ಜಂತರ್ ಮಂತರ್‌ನಲ್ಲಿ ಜಮಾಯಿಸಿರುವ ಸಾವಿರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಆಕ್ರೋಶ ಈಗ ಕೇವಲ ಶಿಕ್ಷಣ ಸಚಿವರಿಗೆ ಸೀಮಿತವಾಗಿಲ್ಲ, ಬದಲಿಗೆ ನೇರವಾಗಿ ಪ್ರಧಾನಿ ಮೋದಿಯವರ ವಿರುದ್ಧ ತಿರುಗಿದೆ ಎಂದು ಸಿಜೆಪಿ ನಾಯಕರು ಹೇಳಿದ್ದಾರೆ. ವಿದ್ಯಾರ್ಥಿಗಳ ಧ್ವನಿಯನ್ನು ಆಲಿಸದ ಪ್ರಧಾನಿ ವಿರುದ್ಧ ಪ್ರತಿಭಟನಾ ಸ್ಥಳದಲ್ಲಿ ಭಾರಿ ಘೋಷಣೆಗಳು ಮೊಳಗುತ್ತಿವೆ. ಜೂನ್ 20 ರಿಂದ ಆರಂಭವಾಗಿರುವ ಈ ಬೃಹತ್ ಹೋರಾಟವು ಶಿಕ್ಷಣ ವ್ಯವಸ್ಥೆಯ ಸಂಪೂರ್ಣ ಸುಧಾರಣೆಗೆ ಆಗ್ರಹಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !