October 10, 2026
Saturday, October 10, 2026
spot_img

ʼನಟಿ ತ್ರಿಷಾ ಮನೆಯಲ್ಲಿ ಬಾಂಬ್‌ ಇಟ್ಟಿದ್ದೇವೆ, ಇನ್ನೇನು ಕೆಲವೇ ನಿಮಿಷದಲ್ಲಿ ಸ್ಫೋಟ ಆಗತ್ತೆʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ತ್ರಿಷಾ ಕೃಷ್ಣನ್ ಮನೆಗೆ ಬಾಂಬ್‌ ಬೆದರಿಕೆ ಬಂದಿದೆ. ನಟಿಯ ಮನೆಯ ಇ-ಮೇಲ್‌ಗೆ ಬಾಂಬ್‌ ಬೆದರಿಕೆ ಬಂದಿದ್ದು, ಸ್ಥಳದಲ್ಲಿ ಆತಂಕ ಸೃಷ್ಟಿಯಾಗಿತ್ತು.

ಚೆನ್ನೈನ ಅಲ್ವಾರ್‌ಪೇಟೆಯಲ್ಲಿರುವ ತ್ರಿಷಾ ನಿವಾಸದಲ್ಲಿ ಬಾಂಬ್‌ ಇದೆ. ಇನ್ನೇನು ಕೆಲವೇ ಕ್ಷಣದಲ್ಲಿ ಬ್ಲಾಸ್ಟ್‌ ಆಗುತ್ತದೆ ಎಂದು ಪೊಲೀಸ್‌ ಠಾಣೆಗೂ ಕರೆ ಬಂದಿದೆ.

ಕೆಲವೇ ಕ್ಷಣಗಳಲ್ಲಿ ಬ್ಲಾಸ್ಟ್‌ ಎಂದು ಹೇಳಿದ್ದಕ್ಕೆ ಪೊಲೀಸರು ಗಾಬರಿಯಾಗಿದ್ದು, ತಕ್ಷಣ ಬಾಂಬ್‌ ನಿಷ್ಕ್ರಿಯ ದಳದ ಜತೆ ತ್ರಿಷಾ ಮನೆಗೆ ತಲುಪಿದರು. ಪ್ರತೀ ಮೂಲೆಯನ್ನು ಜಾಲಾಡಿದರು ಆದರೆ ಯಾವುದೇ ಬಾಂಬ್‌ ಸಿಕ್ಕಿಲ್ಲ.

ನಂತರ ಇದೊಂದು ಹುಸಿ ಬಾಂಬ್‌ ಬೆದರಿಕೆ ಕರೆ ಎಂದು ದೃಢಪಟ್ಟಿದೆ. ಈ ಸಮಯದಲ್ಲಿ ನಟಿ ಮನೆಯಲ್ಲಿ ಇದ್ದರೋ ಇಲ್ಲವೋ ತಿಳಿದುಬಂದಿಲ್ಲ.

Must Read