March 10, 2026
Tuesday, March 10, 2026
spot_img

ಫೆಬ್ರವರಿ 26ಕ್ಕೆ ಮದುವೆ? ಮ್ಯಾಚಿಂಗ್ ಡ್ರೆಸ್ ಹಾಕ್ಕೊಂಡು ಮುಂಬೈನಿಂದ ಹಾರಿದ ವಿಜಯ್-ರಶ್ಮಿಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರರಂಗದಲ್ಲಿ ಹೆಚ್ಚು ಗಮನ ಸೆಳೆದಿರುವ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಕುರಿತ ಮಾತುಕತೆ ಮತ್ತೊಮ್ಮೆ ಜೋರಾಗಿದೆ. ಫೆಬ್ರವರಿ 26ರಂದು ಇವರಿಬ್ಬರು ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಹಲವು ವರ್ಷಗಳಿಂದ ಇವರ ಸ್ನೇಹ ಮತ್ತು ಆತ್ಮೀಯತೆ ಬಗ್ಗೆ ಮಾತುಗಳು ಕೇಳಿಬರುತ್ತಿದ್ದರೂ, ಈ ಜೋಡಿ ತಮ್ಮ ವೈಯಕ್ತಿಕ ಜೀವನವನ್ನು ಬಹಿರಂಗಪಡಿಸಲು ಹಿಂದೇಟು ಹಾಕುತ್ತಾ ಬಂದಿದ್ದಾರೆ.

ಇದನ್ನೂ ಓದಿ:

‘ಗೀತ ಗೋವಿಂದಂ’ ಚಿತ್ರದ ವೇಳೆ ಆರಂಭವಾದ ಪರಿಚಯ ಕ್ರಮೇಣ ಗಟ್ಟಿಯಾದ ಸ್ನೇಹಕ್ಕೆ ತಿರುಗಿದ್ದು, ಅದೇ ಈಗ ಮದುವೆ ಹಂತಕ್ಕೆ ಬಂದಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ನಡುವೆ, ಭಾನುವಾರ ರಾತ್ರಿ ಮುಂಬೈ ವಿಮಾನ ನಿಲ್ದಾಣದಿಂದ ಇಬ್ಬರೂ ಪ್ರತ್ಯೇಕವಾಗಿ ಪ್ರಯಾಣ ಬೆಳೆಸಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಮದುವೆ ಸಿದ್ಧತೆಗಾಗಿ ವಿದೇಶಕ್ಕೆ ತೆರಳಿದ್ದಾರೇ ಎಂಬ ಪ್ರಶ್ನೆಯೂ ಮೂಡಿದೆ.

ಇವರ ವಿವಾಹ ಜೈಪುರನಲ್ಲಿ ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಆದರೆ ಈ ವಿಷಯದ ಬಗ್ಗೆ ರಶ್ಮಿಕಾ ಇನ್ನೂ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಮದುವೆ ಕುರಿತು ಕೇಳಿದಾಗಲೆಲ್ಲಾ, ಸರಿಯಾದ ಸಮಯದಲ್ಲಿ ಹೇಳುತ್ತೇನೆ ಎಂದು ಅವರು ಉತ್ತರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಅಧಿಕೃತ ಸುದ್ದಿಗಾಗಿ ಕಾತರದಿಂದ ಕಾಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !