July 10, 2026
Friday, July 10, 2026
spot_img

Why So? | ಡಯಟ್, ವ್ಯಾಯಾಮ ಮಾಡ್ತಿದ್ದರೂ ತೂಕ ಏರುತ್ತಿದೆಯೇ? ಅದಕ್ಕೆ ರೀಸನ್‌ ಏನು ಗೊತ್ತಾ?

ಇಂದಿನ ಆಧುನಿಕ ಹಾಗೂ ವೇಗದ ಜೀವನಶೈಲಿಯಲ್ಲಿ ತೂಕ ಹೆಚ್ಚಾಗುವುದು ಅಥವಾ ಬೊಜ್ಜು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತೂಕ ಇಳಿಸಲು ನಾವು ಸಾಮಾನ್ಯವಾಗಿ ಜಿಮ್, ಯೋಗ, ಮತ್ತು ಕಟ್ಟುನಿಟ್ಟಿನ ಆಹಾರ ಕ್ರಮಗಳನ್ನು ಅನುಸರಿಸುತ್ತೇವೆ. ಆದರೆ, ನಾವೆಲ್ಲರೂ ನಿರ್ಲಕ್ಷಿಸುವ ಒಂದು ಮುಖ್ಯವಾದ ವಿಷಯವೆಂದರೆ ‘ನಿದ್ರೆ’. ಹೌದು, ಕಡಿಮೆ ನಿದ್ರೆ ಮಾಡುವುದರಿಂದ ದೇಹದ ತೂಕ ವೇಗವಾಗಿ ಹೆಚ್ಚಾಗುತ್ತದೆ ಎಂಬುದು ನಿಮಗೆ ಗೊತ್ತಾ. ಒಬ್ಬ ವಯಸ್ಕ ವ್ಯಕ್ತಿಗೆ ದಿನಕ್ಕೆ ಕನಿಷ್ಠ 7 ರಿಂದ 9 ಗಂಟೆಗಳ ಆಳವಾದ ನಿದ್ರೆ ಅತ್ಯಗತ್ಯವಾಗಿದೆ

ಕಡಿಮೆ ನಿದ್ರೆ ಮಾಡುವುದರಿಂದ ದೇಹದ ತೂಕ ಹೆಚ್ಚಾಗಲು ಕಾರಣಗಳು

ಹಸಿವಿನ ಹಾರ್ಮೋನ್‌ಗಳ ಏರುಪೇರು:
ನಮ್ಮ ದೇಹದಲ್ಲಿ ಹಸುವನ್ನು ನಿಯಂತ್ರಿಸಲು ಗ್ರೆಲಿನ್ ಮತ್ತು ಲೆಪ್ಟಿನ್ ಎಂಬ ಎರಡು ಹಾರ್ಮೋನ್‌ಗಳು ಕೆಲಸ ಮಾಡುತ್ತವೆ. ನಿದ್ರೆ ಕಡಿಮೆಯಾದಾಗ, ಹಸಿವನ್ನು ಹೆಚ್ಚಿಸುವ ‘ಗ್ರೆಲಿನ್’ ಹಾರ್ಮೋನ್ ಮಟ್ಟ ಜಾಸ್ತಿಯಾಗುತ್ತದೆ ಮತ್ತು ಹೊಟ್ಟೆ ತುಂಬಿದ ಭಾವನೆ ಕೊಡುವ ‘ಲೆಪ್ಟಿನ್’ ಹಾರ್ಮೋನ್ ಮಟ್ಟ ಕುಸಿಯುತ್ತದೆ. ಇದರಿಂದಾಗಿ ನಮಗೆ ಪದೇ ಪದೇ ಹಸಿವಾಗುತ್ತದೆ.

ಜಂಕ್ ಫುಡ್ ತಿನ್ನುವ ಅತಿಯಾದ ಬಯಕೆ:
ನಿದ್ರೆಯ ಕೊರತೆಯಾದಾಗ ನಮ್ಮ ಮೆದುಳಿಗೆ ಸರಿಯಾದ ವಿಶ್ರಾಂತಿ ಸಿಗುವುದಿಲ್ಲ. ಈ ಸಮಯದಲ್ಲಿ ಮೆದುಳು ಸುಲಭವಾಗಿ ಶಕ್ತಿ ನೀಡುವ ಆಹಾರಗಳನ್ನು ಬಯಸುತ್ತದೆ. ಪರಿಣಾಮವಾಗಿ, ನಮಗೆ ಐಸ್‌ಕ್ರೀಮ್, ಚಾಕೊಲೇಟ್, ಪಿಜ್ಜಾ, ಬರ್ಗರ್ ಅಥವಾ ಕರಿದ ಪದಾರ್ಥಗಳಂತಹ ಅತಿ ಹೆಚ್ಚು ಕ್ಯಾಲರಿ ಹೊಂದಿರುವ ಜಂಕ್ ಫುಡ್ ತಿನ್ನುವ ಹಂಬಲ ಹೆಚ್ಚಾಗುತ್ತದೆ.

ಮೆಟಾಬಾಲಿಸಂ ಕುಂಠಿತಗೊಳ್ಳುವುದು:
ನಾವು ನಿದ್ರಿಸುವಾಗ ನಮ್ಮ ದೇಹವು ಒಳಗಿನ ಅಂಗಾಂಗಗಳನ್ನು ದುರಸ್ತಿ ಮಾಡಿಕೊಳ್ಳುತ್ತದೆ. ಸರಿಯಾಗಿ ನಿದ್ರೆ ಮಾಡದಿದ್ದರೆ ದೇಹದ ಇನ್ಸುಲಿನ್ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಇದರಿಂದಾಗಿ ನಾವು ತಿಂದ ಆಹಾರವು ಶಕ್ತಿಯಾಗಿ ಬದಲಾಗುವ ಬದಲು, ನೇರವಾಗಿ ಕೊಬ್ಬಿನ ರೂಪದಲ್ಲಿ ದೇಹದಲ್ಲಿ ಶೇಖರಣೆಯಾಗಲು ಆರಂಭಿಸುತ್ತದೆ.

ರಾತ್ರಿ ತಡವಾಗಿ ತಿನ್ನುವ ಅಭ್ಯಾಸ:
ರಾತ್ರಿ ತಡವಾಗಿ ಮಲಗುವವರು ಹೆಚ್ಚಾಗಿ ಟಿವಿ ಅಥವಾ ಮೊಬೈಲ್ ನೋಡುತ್ತಾ ಕುಳಿತುಕೊಳ್ಳುತ್ತಾರೆ. ಈ ಸಮಯದಲ್ಲಿ ಅರಿವಿಲ್ಲದೆಯೇ ಏನನ್ನಾದರೂ ತಿನ್ನುವ ಅಭ್ಯಾಸ ರೂಢಿಯಾಗುತ್ತದೆ. ರಾತ್ರಿ ಸಮಯದಲ್ಲಿ ಜೀರ್ಣಕ್ರಿಯೆ ನಿಧಾನವಾಗಿರುವುದರಿಂದ, ಈ ಸಮಯದಲ್ಲಿ ಸೇವಿಸುವ ಕ್ಯಾಲರಿಗಳು ನೇರವಾಗಿ ಹೊಟ್ಟೆಯ ಬೊಜ್ಜನ್ನು ಹೆಚ್ಚಿಸುತ್ತವೆ.

ಪರಿಹಾರಗಳು
ಪ್ರತಿದಿನ ರಾತ್ರಿ ಒಂದೇ ನಿರ್ದಿಷ್ಟ ಸಮಯಕ್ಕೆ ಮಲಗುವ ಮತ್ತು ಬೆಳಗ್ಗೆ ಏಳುವ ಹವ್ಯಾಸ ಬೆಳೆಸಿಕೊಳ್ಳಬೇಕು.

ಮಲಗುವ ಕನಿಷ್ಠ 30 ನಿಮಿಷಗಳ ಮುಂಚೆ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿ ನೋಡುವುದನ್ನು ನಿಲ್ಲಿಸುವುದು ಉತ್ತಮ.

ಸಂಜೆಯ ನಂತರ ಚಹಾ ಅಥವಾ ಕಾಫಿ ಕುಡಿಯುವುದನ್ನು ತಪ್ಪಿಸಬೇಕು. ಇದು ನಿದ್ರೆಯನ್ನು ಕಡೆಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !