ಇಂದಿನ ಜೀವನ ಶೈಲಿಯಲ್ಲಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸುವ ಆರೋಗ್ಯ ಸಮಸ್ಯೆಗಳಲ್ಲಿ ಅನೀಮಿಯಾ (ರಕ್ತಹೀನತೆ) ಪ್ರಮುಖವಾಗಿದೆ. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗುವ ಸ್ಥಿತಿಯನ್ನು ಅನೀಮಿಯಾ ಎಂದು ಕರೆಯುತ್ತಾರೆ. ಇದರಿಂದ ದೇಹಕ್ಕೆ ಬೇಕಾದಷ್ಟು ಆಮ್ಲಜನಕ ತಲುಪದೇ ದೌರ್ಬಲ್ಯ, ತಲೆ ಸುತ್ತು, ಉಸಿರಾಟದ ತೊಂದರೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಕಿಶೋರಿಯರು, ಗರ್ಭಿಣಿಯರು ಹಾಗೂ ಯುವ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ.
ಮಹಿಳೆಯರಲ್ಲಿ ಅನೀಮಿಯಾ ಹೆಚ್ಚಾಗಲು ಹಲವು ಕಾರಣಗಳಿವೆ. ಮಾಸಿಕ ಚಕ್ರದ ಸಮಯದಲ್ಲಿ ರಕ್ತ ನಷ್ಟವಾಗುವುದು, ಸರಿಯಾದ ಪೋಷಕಾಂಶಗಳ ಕೊರತೆ, ಗರ್ಭಧಾರಣೆ ಹಾಗೂ ದೈಹಿಕ ಶ್ರಮ ಹೆಚ್ಚಿರುವುದು ಪ್ರಮುಖ ಕಾರಣಗಳಾಗಿ ಪರಿಣಮಿಸುತ್ತವೆ. ಸರಿಯಾದ ಆಹಾರ ಪದ್ಧತಿ ಇಲ್ಲದಿದ್ದರೆ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮಹಿಳೆಯರಲ್ಲಿ ಅನೀಮಿಯಾ ಹೆಚ್ಚಾಗಲು ಕಾರಣಗಳು
- ಮಾಸಿಕ ಚಕ್ರದ ವೇಳೆ ನಿಯಮಿತವಾಗಿ ರಕ್ತಸ್ರಾವ
- ಐರನ್, ವಿಟಮಿನ್ B12 ಹಾಗೂ ಫೋಲಿಕ್ ಆಸಿಡ್ ಕೊರತೆ
- ಗರ್ಭಧಾರಣೆ ಸಮಯದಲ್ಲಿ ಹೆಚ್ಚುವರಿ ಪೋಷಕಾಂಶಗಳ ಅಗತ್ಯ
- ಅಸಮತೋಲನ ಆಹಾರ ಪದ್ಧತಿ
- ದೀರ್ಘಕಾಲದ ದೌರ್ಬಲ್ಯ ಮತ್ತು ಆರೋಗ್ಯ ನಿರ್ಲಕ್ಷ್ಯ
ಅನೀಮಿಯಾದ ಲಕ್ಷಣಗಳು:
- ಹೆಚ್ಚು ದೌರ್ಬಲ್ಯ ಮತ್ತು ಬೇಗನೇ ಆಯಾಸ
- ತಲೆ ಸುತ್ತುವುದು
- ಚರ್ಮದ ಬಣ್ಣ ಹಳದಿಯಾಗುವುದು
- ಉಸಿರಾಟದಲ್ಲಿ ತೊಂದರೆ
- ಗಮನ ಕೆಂದ್ರೀಕರಿಸಲು ಕಷ್ಟ
ತಡೆಗಟ್ಟಲು ಮಾಡಬೇಕಾದುದು:
- ಪಾಲಕ್, ಬೀಟ್‌ರೂಟ್, ಕಾಳುಗಳು, ಹಸಿರು ತರಕಾರಿಗಳನ್ನು ಆಹಾರದಲ್ಲಿ ಸೇರಿಸಬೇಕು
- ಖರ್ಜೂರ, ದ್ರಾಕ್ಷಿ ಹಾಗೂ ಐರನ್ ಸಮೃದ್ಧ ಆಹಾರ ಸೇವಿಸಬೇಕು
- ವೈದ್ಯರ ಸಲಹೆಯಂತೆ ಐರನ್ ಪೂರಕಗಳು ತೆಗೆದುಕೊಳ್ಳಬೇಕು
- ನಿಯಮಿತ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು
ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡದೇ ಸರಿಯಾದ ಆಹಾರ ಮತ್ತು ಜೀವನಶೈಲಿಯನ್ನು ಅನುಸರಿಸಿದರೆ ಅನೀಮಿಯಾವನ್ನು ನಿಯಂತ್ರಿಸಲು ಸಾಧ್ಯ. ಆರೋಗ್ಯಕರ ಜೀವನಕ್ಕೆ ಪೋಷಕಾಂಶಯುಕ್ತ ಆಹಾರವೇ ಮುಖ್ಯ.



