September 29, 2026
Tuesday, September 29, 2026
spot_img

ಸಂಭ್ರಮದಿಂದ ಆರಂಭವಾದ ಯಲ್ಲಾಪುರದ ಜಾತ್ರೆ: ಕಣ್ಮನ ಸೆಳೆದ ಅಕ್ಕ-ತಂಗಿಯರ ಮೆರವಣಿಗೆ

ಹೊಸದಿಗಂತ ವರದಿ ಯಲ್ಲಾಪುರ :

ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ರಾಜ್ಯದ ಅತಿ ದೊಡ್ಡ ಜಾತ್ರೆಗಳಲ್ಲೊಂದಾದ ಯಲ್ಲಾಪುರದ ಅಧಿದೇವತೆಯರಾದ ಶ್ರೀ ಗ್ರಾಮದೇವಿಯರ ಜಾತ್ರಾ ಮಹೋತ್ಸವ ಬುಧವಾರ ಸಂಭ್ರಮದಿಂದ ಆರಂಭವಾಯಿತು.

ರಾಮಾಪುರದ ಶಳೆ ದೇವರ ಅನುಮತಿ ಪಡೆದ ನಂತರದಲ್ಲಿ ಗ್ರಾಮದೇವಿಯರಾದ ಕಾಳಮ್ಮ ದುರ್ಗಮ್ಮ ಅಕ್ಕತಂಗಿಯರ ಭವ್ಯ ಮೂರ್ತಿಯನ್ನು ಭಕ್ತರು ತಲೆ ಮೇಲೆ ಹೊತ್ತ ಭವ್ಯ ಮೆರವಣಿಗೆ ಆರಂಭವಾಯಿತು.

ರಸ್ತೆಯುದ್ದಕ್ಕೂ ಭಕ್ತರು ಈ ಅಕ್ಕತಂಗಿಯಂದಿರನ್ನು ಹೊತ್ತು ಹೊನ್ನಾಟ ವಾಡುತ್ತಾ ಸಾಗಿದ ಮೆರವಣಿಗೆಗೆ ರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ಈ ಮೆರವಣಿಗೆ ಸಂಜೆಯ ವೇಳೆ ಜಾತ್ರಾ ಗದ್ದುಗೆ ತಲುಪಲಿದ್ದು ಕಾಳಮ್ಮ ದುರ್ಗಮ್ಮ ದೇವಿಯರ ಪ್ರತಿಷ್ಠಾಪನೆ ಆಗಲಿದೆ. ಅಲ್ಲಿಂದ ಜಾತ್ರೆಯ ಪೂಜಾ ಸೇವೆಗಳು ಆರಂಭವಾಗಲಿವೆ. ಜಾತ್ರೆ 19ರ ವರೆಗೆ ಜರುಗಲಿದೆ.

Must Read