October 5, 2026
Monday, October 5, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 85 | ಗೋಧಿ, ಮೈದಾ ಪೂರಿ ತಿಂದಿರ್ತೀರಾ.. ಆದರೆ ರಾಗಿ ಪೂರಿ ಯಾವತ್ತಾದ್ರೂ ಟ್ರೈ ಮಾಡಿದ್ದೀರಾ?

ರಾಗಿ ಹಿಟ್ಟು

ಗೋಧಿ ಹಿಟ್ಟು

ಚಿರೋಟಿ ರವೆ

ಉಪ್ಪು

ಜೀರಿಗೆ

ಎಣ್ಣೆ

ನೀರು

ಮೊದಲು ಒಂದು ಪಾತ್ರೆಗೆ ರಾಗಿ ಹಿಟ್ಟು, ಗೋಧಿ ಹಿಟ್ಟು, ಚಿರೋಟಿ ರವೆ, ಉಪ್ಪು ಮತ್ತು ಜೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಚಮಚ ಬಿಸಿ ಎಣ್ಣೆ ಹಾಕಿ ಮಿಕ್ಸ್ ಮಾಡಿದರೆ ಪೂರಿ ಸಾಫ್ಟ್ ಆಗಿ ಬರುತ್ತೆ. ಈಗ ಸ್ವಲ್ಪ ಸ್ವಲ್ಪವೇ ಉಗುರುಬೆಚ್ಚಗಿನ ನೀರು ಹಾಕಿಕೊಳ್ಳುತ್ತಾ ಹಿಟ್ಟನ್ನು ಗಟ್ಟಿಯಾಗಿ ಕಲಸಿಕೊಳ್ಳಿ. ಕಲಸಿದ ಹಿಟ್ಟಿನ ಮೇಲೆ ಸ್ವಲ್ಪ ಎಣ್ಣೆ ಸವರಿ, ಮುಚ್ಚಳ ಮುಚ್ಚಿ ಹತ್ತರಿಂದ ಹದಿನೈದು ನಿಮಿಷ ಹಾಗೇ ಬಿಡಿ.

ಹಿಟ್ಟಿನಿಂದ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ. ಲಟ್ಟಣಿಗೆಗೆ ಸ್ವಲ್ಪ ಎಣ್ಣೆ ಹಚ್ಚಿ, ಪೂರಿಗಳನ್ನು ಲಟ್ಟಿಸಿ. ಪೂರಿ ತೀರಾ ತೆಳ್ಳಗೆ ಅಥವಾ ತೀರಾ ದಪ್ಪಗೆ ಇರಬಾರದು. ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ. ಎಣ್ಣೆ ಸರಿಯಾಗಿ ಕಾದ ಮೇಲೆ ಲಟ್ಟಿಸಿದ ಪೂರಿಯನ್ನು ಹಾಕಿ, ಪೂರಿ ಬಲೂನ್ ಥರ ಫುಲ್ ಆಗಿ ಉಬ್ಬಿ ಬರುತ್ತೆ. ಎರಡೂ ಕಡೆ ಚೆನ್ನಾಗಿ ಬೇಯಿಸಿ ತೆಗೆಯಿರಿ.

ಈಗ ಬಿಸಿ ಬಿಸಿಯಾದ, ರುಚಿಕರವಾದ ರಾಗಿ ಪೂರಿ ರೆಡಿ! ಇದರ ಜೊತೆಗೆ ಆಲೂಗಡ್ಡೆ ಸಾಗು, ಕಾಯಿ ಚಟ್ನಿ ಇದ್ದರೆ ಕಾಂಬಿನೇಷನ್ ನೆಕ್ಸ್ಟ್ ಲೆವೆಲ್‌ನಲ್ಲಿ ಇರುತ್ತೆ.

Must Read