May 9, 2026
Saturday, May 9, 2026
spot_img

SHOCKING | ಪಾರ್ಟಿ ಮಾಡುವ ವೇಳೆ ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿ ಯುವಕ ಸಾ*ವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪಾರ್ಟಿ ಮಾಡುವ ವೇಳೆ ಚಿಕನ್‌ ಮೂಳೆ ಗಂಟಲಿನಲ್ಲಿ ಸಿಲುಕಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಶಿವಮೊಗ್ಗದ ಕುಂಸಿಯ ಚೆನ್ನಹಳ್ಳಿಯಲ್ಲಿ ನಡೆದಿದೆ.

ಮೃತ ಯುವಕನನ್ನು 21 ವರ್ಷದ ಸಚಿನ್‌ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಒಬ್ಬರ ಜನ್ಮದಿನದ ಪಾರ್ಟಿ ಇದ್ದು, ನಾನ್‌ ವೆಜ್‌ ಊಟದ ವ್ಯವಸ್ಥೆ ಮಾಡಲಾಗಿತ್ತು. ಎಲ್ಲರ ಜೊತೆಗೂಡಿ ಸಚಿನ್‌ ಕೂಡ ಊಟ ಮುಗಿಸಿ ಮನೆಗೆ ವಾಪಾಸಾಗಿದ್ದ.

ಬೆಳಗ್ಗೆ ಸಚಿನ್‌ ಮೃತದೇಹ ಪತ್ತೆಯಾಗಿದೆ. ಈ ವಿಚಾರ ತಿಳಿದ ತಕ್ಷಣ ಸಚಿನ್‌ನ ಕುಟುಂಬದವರು ಆತಂಕಗೊಂಡು ಶವವನ್ನು ಶಿವಮೊಗ್ಗಕ್ಕೆ ಕೊಂಡೊಯ್ದಿದ್ದರು. ಘಟನೆಯ ಕುರಿತು ಗ್ರಾಮಸ್ಥರು ಕುಂಸಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣವೇ ಸ್ಥಳಕ್ಕಾಗಮಿಸಿದ ಪೊಲೀಸರು, ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಮದ್ಯಪಾನ ಮಾಡಿದ್ದ ಸಚಿನ್‌ಗೆ ಊಟ ಮಾಡುವ ವೇಳೆ ಗಂಟಲಲ್ಲಿ ಚಿಕನ್‌ ಮೂಳೆ ಸಿಲುಕಿದ್ದು ಗೊತ್ತಾಗಿಲ್ಲ. ಇದರಿಂದಲೇ ಈತ ಮೃತಪಟ್ಟಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !