ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಬಾರಿ 45,415 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ.
ಈ ಬಾರಿ ರಾಜ್ಯಾದ್ಯಂತ ಸುಮಾರು 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಶೇ.91.1 ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಉಳಿದಂತೆ ಫೈಲ್ ಆದ ವಿದ್ಯಾರ್ಥಿಗಳು ಪರೀಕ್ಷೆ- 2 ಮೂಲಕ ಮತ್ತೊಮ್ಮೆ ಬರೆಯಬಹುವುದು. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಶುಲ್ಕವನ್ನು ಸರಕಾರವೇ ಭರಿಸಲಿದೆ ಎಂದು ತಿಳಿಸಿದರು.
ಫೇಲ್ ಆದ 45,415 ವಿದ್ಯಾರ್ಥಿಗಳಲ್ಲಿ ವಿಷಯ 1 ರಲ್ಲಿ 20,691 ವಿದ್ಯಾರ್ಥಿಗಳು, ವಿಷಯ 2ರಲ್ಲಿ 10,509 ವಿದ್ಯಾರ್ಥಿಗಳು, ವಿಷಯ 3ರಲ್ಲಿ 6,103 ವಿದ್ಯಾರ್ಥಿಗಳು, ವಿಷಯ 4ರಲ್ಲಿ 3,799 ವಿದ್ಯಾರ್ಥಿಗಳು, ವಿಷಯ 4ರಲ್ಲಿ 2,552 ವಿದ್ಯಾರ್ಥಿಗಳು, ಎಲ್ಲಾ ವಿಷಯದಲ್ಲಿ 1,716 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪರೀಕ್ಷೆಯ ಫಲಿತಾಂಶದಿಂದ ಯಾವುದೇ ವಿದ್ಯಾರ್ಥಿಯು ನಿರಾಸೆಗೊಳ್ಳದೆ ಮುಂಬರುವ ಪರೀಕ್ಷೆ-2ಕ್ಕೆ ನೋಂದಾಯಿಸಿ, ಮತ್ತೊಮ್ಮೆ ಪರೀಕ್ಷೆ ಬರೆಯಿರಿ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಇಲಾಖೆಯ ಉಪ ನಿರ್ದೇಶಕರುಗಳಿಗೆ ಸೂಚನೆ ನೀಡಿದ್ದೇನೆ ಎಂದರು.



