October 28, 2026
Wednesday, October 28, 2026
spot_img

ಸ್ವೀಟ್ ತಿನ್ನಬೇಕು ಅನಿಸ್ತಿದ್ಯಾ? ಹಾಗಾದರೆ ಈ ಹೆಲ್ದಿ ಪ್ರೊಟೀನ್ ಲಡ್ಡು ಮಾಡಿಕೊಂಡು ತಿನ್ನಿ

ಬೇಕಾಗುವ ಸಾಮಗ್ರಿಗಳು:

ಕಡಲೆಬೀಜ

ಬಾದಾಮಿ ಮತ್ತು ಗೋಡಂಬಿ

ಖರ್ಜೂರ

ಕೊಬ್ಬರಿ

ಏಲಕ್ಕಿ ಪುಡಿ

ತುಪ್ಪ

ಮಾಡುವ ವಿಧಾನ

ಮೊದಲು ಬಾಣಲೆಯಲ್ಲಿ ಕಡಲೆಬೀಜ, ಬಾದಾಮಿ ಮತ್ತು ಗೋಡಂಬಿಯನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ. ತಣ್ಣಗಾದ ಮೇಲೆ ಕಡಲೆಬೀಜದ ಸಿಪ್ಪೆ ತೆಗೆಯಿರಿ. ಹುರಿದಿಟ್ಟ ಕಡಲೆಬೀಜ ಮತ್ತು ಖರ್ಜೂರವನ್ನು ಮಿಕ್ಸಿ ಜಾರಿಗೆ ಹಾಕಿ. ನೀರು ಸೇರಿಸದೆ ತರಿಯಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಕೊಬ್ಬರಿ ತುರಿ, ಏಲಕ್ಕಿ ಪುಡಿ ಮತ್ತು ಬಿಸಿ ಮಾಡಿದ ತುಪ್ಪವನ್ನು ಸೇರಿಸಿ ಕೈಯಿಂದ ಚೆನ್ನಾಗಿ ಒಗ್ಗೂಡಿಸಿ. ಈಗ ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು, ನಿಮ್ಮ ಇಷ್ಟದ ಗಾತ್ರದಲ್ಲಿ ಉಂಡೆಗಳನ್ನು ಕಟ್ಟಿ. ಡಬ್ಬದಲ್ಲಿ ಭದ್ರವಾಗಿಟ್ಟರೆ ಈ ಲಡ್ಡುಗಳು 15-20 ದಿನಗಳವರೆಗೆ ತಾಜಾವಾಗಿರುತ್ತವೆ.

Must Read

Skip to toolbar