November 6, 2026
Friday, November 6, 2026
spot_img

ಪತ್ನಿ ತವರು ಮನೆಯವರನ್ನೆಲ್ಲಾ ಕೊಂದ ಕ್ಯಾಬ್‌ ಡ್ರೈವರ್‌ : ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕ ತನ್ನ ಕುಟುಂಬದ 7 ಮಂದಿಯನ್ನು ಹತ್ಯೆ ಮಾಡಿರುವ ಘಟನೆ ಬಗ್ಗೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಮಾತನಾಡಿದ್ದಾರೆ.

ಇದು ಹಠಾತ್‌ ಕೃತ್ಯವಲ್ಲ, ಕ್ಯಾಬ್‌ ಚಾಲಕನ ಪೂರ್ವ ನಿಯೋಜಿತ ಸಂಚು. ಕೊಲೆಗೆ ನಿಖರವಾದ ಕಾರಣ ಇನ್ನೂ ಗೊತ್ತಾಗಿಲ್ಲ. ಪೊಲೀಸರು ಎಲ್ಲ ರೀತಿಯ ತನಿಖೆ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಹತ್ಯೆ ಮಾಡಿರುವ ಕ್ಯಾಬ್‌ ಚಾಲಕನ ಮನಸ್ಥಿತಿ ಸರಿ ಇಲ್ಲ. ಆತ ಯಾರ ಜೊತೆಗೂ ಉತ್ತಮ ನಡವಳಿಕೆ ಹೊಂದಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ಕಾರಣಕ್ಕಾಗಿ ಇಷ್ಟೊಂದು ಭೀಕರವಾಗಿ ಇಡೀ ಕುಟುಂಬವನ್ನೇ ಕೊಂದಿದ್ದಾನೆ ಎನ್ನುವ ಬಗ್ಗೆ ತನಿಖೆ ಮಾಡಲಾಗುತ್ತಿದೆ.

ಮಗಳನ್ನು ಬ್ರೈನ್‌ವಾಶ್‌ ಮಾಡಿ ಕೊಲೆ ಮಾಡಲು ಸಹಾಯ ಪಡೆದಿರುವ ಶಂಕೆಯೂ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ ಎಂದು ಹೇಳಿದ್ದಾರೆ.

ಸ್ಥಳೀಯರ ಮಾಹಿತಿ ಅನ್ವಯ ಕೊಲೆಗಳು ಆರಂಭವಾಗಿ ಹತ್ತು ದಿನಗಳು ಕಳೆದಿವೆ. ಆತ ಒಬ್ಬೊಬ್ಬರನ್ನೇ ಕೊಲೆ ಮಾಡಿ ನಂದಿಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೃತದೇಹಗಳನ್ನು ಎಸೆದು ಬಂದಿದ್ದಾನೆ. ಸದ್ಯ ಒಂದು ಮೃತದೇಹ ಮಾತ್ರ ಪತ್ತೆಯಾಗಿದೆ. ಡ್ರೈವರ್‌ ಇಂದುಶೇಖರ ತನ್ನ ಪತ್ನಿ ಹಾಗೂ ಆಕೆಯ ತವರು ಮನೆಯವರ ಮೇಲೆ ದ್ವೇಷ ಹೊಂದಿದ್ದ ಎನ್ನಲಾಗಿದೆ. ಪತ್ನಿ ತವರು ಮನೆಯ ಮೇಲೆ ಇಟ್ಟಿದ್ದ ಪ್ರೀತಿಯನ್ನು ಆತ ಸಹಿಸುತ್ತಿರಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

Must Read