November 10, 2026
Tuesday, November 10, 2026
spot_img

ಅಣ್ಣಾವ್ರ ಹುಟ್ಟೂರಲ್ಲಿ ಆತಂಕ: ರಾಜ್ ಕುಟುಂಬಸ್ಥರ ಮನೆ ಮೇಲೆ ಬಾಂಬ್ ದಾಳಿ ಶಂಕೆ, ಕಿಟಕಿ ಗಾಜುಗಳು ಪುಡಿಪುಡಿ‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಡಾ. ರಾಜ್‌ಕುಮಾರ್ ಅವರ ಹುಟ್ಟೂರಾದ ಗಾಜನೂರಿನಲ್ಲಿ ಭಾರೀ ಆತಂಕ ಸೃಷ್ಟಿಯಾಗಿದ್ದು, ಡಾ. ರಾಜ್ ಅವರ ಸಂಬಂಧಿಕರೊಬ್ಬರ ಮನೆಯ ಮುಂದೆ ನಿಗೂಢ ಸ್ಫೋಟ ಸಂಭವಿಸಿದೆ. ಸ್ಫೋಟದ ಭೀಕರತೆಗೆ ಮನೆಯ ಕಿಟಕಿ ಗಾಜುಗಳು ಸಂಪೂರ್ಣವಾಗಿ ಪುಡಿಪುಡಿ‌ಯಾಗಿದ್ದು, ಇಡೀ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ದೊಡ್ಡ ಗಾಜನೂರಿನಲ್ಲಿ ವಾಸವಾಗಿರುವ ಡಾ. ರಾಜ್‌ಕುಮಾರ್ ಅವರ ಸಂಬಂಧಿ ಮಂಗಳಮ್ಮ ಎಂಬುವರ ಮನೆಯ ಮುಂಭಾಗದಲ್ಲಿ ಈ ದಿಢೀರ್ ಸ್ಫೋಟ ನಡೆದಿದೆ. ಕಿಡಿಗೇಡಿಗಳು ಯಾರಾದರೂ ಉದ್ದೇಶಪೂರ್ವಕವಾಗಿ ಕಚ್ಚಾ ಬಾಂಬ್ ಎಸೆದಿದ್ದಾರೆಯೇ ಅಥವಾ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಆಟಂ ಬಾಂಬ್ ಬಳಸಿ ಈ ಕೃತ್ಯ ಎಸಗಲಾಗಿದೆಯೇ ಎಂಬ ಅನುಮಾನ ಮೂಡಿದೆ.

ಸ್ಫೋಟದ ತೀವ್ರತೆಗೆ ಇಡೀ ಕುಟುಂಬಸ್ಥರು ದಿಕ್ಕುತೋಚದಂತಾಗಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ತಮಿಳುನಾಡಿನ ತಾಳವಾಡಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:

ತನಿಖೆ ಚುರುಕುಗೊಳಿಸಿದ ಪೊಲೀಸರು

ಘಟನಾ ಸ್ಥಳದಲ್ಲಿ ಬಿದ್ದಿರುವ ಸ್ಫೋಟದ ಅವಶೇಷಗಳು ಹಾಗೂ ರಾಸಾಯನಿಕ ತುಣುಕುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಅವುಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. ಇದು ಕೃತ್ಯಕ್ಕೆ ಬಳಸಲಾದ ಕಚ್ಚಾ ಬಾಂಬ್ ಆಗಿದೆಯೇ ಅಥವಾ ಪಟಾಕಿ ಅಪಘಾತವೇ ಎಂಬುದನ್ನು ಪತ್ತೆಹಚ್ಚಲು ತನಿಖೆಯನ್ನು ತೀವ್ರಗೊಳಿಸಲಾಗಿದೆ.

Must Read

Skip to toolbar