ಹೊಸದಿಗಂತ ಡಿಜಿಟಲ್ ಡೆಸ್ಕ್:
T20 World Cup 2026 ಸೂಪರ್ 8 ಹಂತದಲ್ಲಿ ಪಾಕಿಸ್ತಾನ ತಂಡ ತನ್ನ ಕೊನೆಯ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಸೆಮಿಫೈನಲ್ ತಲುಪಲು ಶ್ರೀಲಂಕಾ ಟೀಮ್ ವಿರುದ್ಧ ಭಾರಿ ಅಂತರದ ಗೆಲುವು ಅಗತ್ಯವಿದ್ದರೂ, ಅದು ಸಾಧ್ಯವಾಗದೇ ಟೂರ್ನಿಯಿಂದ ಹೊರಬಿದ್ದಿದೆ.
ಹೀಗಾಗಿ ಗ್ರೂಪ್ 2ರಿಂದ ನ್ಯೂಜಿಲೆಂಡ್ ತಂಡ ಎರಡನೇ ತಂಡವಾಗಿ ಸೆಮೀಸ್‌ಗೆ ಪ್ರವೇಶಿಸಿದೆ. ಅಲ್ಲಿ ದಕ್ಷಿಣ ಆಫ್ರಿಕಾ ಟೀಮ್ ಎದುರಾಳಿಯಾಗಲಿದೆ.
ಇದನ್ನೂ ಓದಿ:
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 213 ರನ್ ಕಲೆಹಾಕಿತು. ಸಾಹಿಬ್ಜಾದಾ ಫರ್ಹಾನ್ ಶತಕ ಸಿಡಿಸಿ, ಫಖರ್ ಜಮಾನ್ 84 ರನ್ ಗಳಿಸಿದರು. ಮೊದಲ ವಿಕೆಟ್‌ಗೆ 176 ರನ್ ಜೊತೆಯಾಟ ದಾಖಲಾಯಿತು. ಆದರೆ ಕೊನೆಯಲ್ಲಿ ಏಳು ವಿಕೆಟ್ ಕುಸಿತದಿಂದ ಸ್ಕೋರ್ 213ಕ್ಕೆ ಸೀಮಿತವಾಯಿತು.
ಗುರಿ ಬೆನ್ನಟ್ಟಿದ ಶ್ರೀಲಂಕಾ ಆರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡರೂ, ಮಧ್ಯಕ್ರಮ ಹೋರಾಟದಿಂದ 16ನೇ ಓವರ್‌ನಲ್ಲೇ 150 ರನ್ ಗಡಿ ದಾಟಿತು. ದಾಸುನ್ ಶನಕ–ಪವನ್ ರತ್ನಾಯಕ ಜೊತೆಯಾಟ ಪಾಕಿಸ್ತಾನದ ನೆಟ್ ರನ್ ರೇಟ್ ಕನಸಿಗೆ ಅಂತ್ಯವಾಯಿತು. ಅಂತಿಮವಾಗಿ ಪಾಕಿಸ್ತಾನ 5 ರನ್ ಗೆದ್ದರೂ, ಅಗತ್ಯ ಅಂತರ ಸಿಗದ ಕಾರಣ ಸೆಮಿಫೈನಲ್ ಬಾಗಿಲು ಮುಚ್ಚಿತು.



