March 3, 2026
Tuesday, March 3, 2026
spot_img

ಯುದ್ಧ ಕಾರ್ಮೋಡದ ನಡುವೆ ದುಬೈನಿಂದ ಬೆಂಗಳೂರಿಗೆ ಬಂತು ಮತ್ತೊಂದು ವಿಮಾನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದ ಯುದ್ಧ ಕಾರ್ಮೋಡದ ನಡುವೆ ಅನಿವಾಸಿ ಕನ್ನಡಿಗರ ರಕ್ಷಣೆ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ. ಇಂದು ದುಬೈನಿಂದ ಹೊರಟಿದ್ದ ಎಮಿರೇಟ್ಸ್ EK-566 ವಿಮಾನವು 350 ಪ್ರಯಾಣಿಕರೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದೆ.

ಇಂದು ಮುಂಜಾನೆ ದುಬೈನಿಂದ 490 ಪ್ರಯಾಣಿಕರನ್ನು ಹೊತ್ತು ಮೊದಲ ವಿಮಾನ ಬಂದಿಳಿದಿತ್ತು. ಇದೀಗ ದುಬೈನಿಂದ ಹೊರಟಿದ್ದ ಎರಡನೇ ವಿಮಾನ (EK-566) ಸಂಜೆ ಬೆಂಗಳೂರಿಗೆ ಆಗಮಿಸಿದೆ.

ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಅಧಿಕಾರಿಗಳು ಸಂತ್ರಸ್ತ ಪ್ರಯಾಣಿಕರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಕಳೆದ ರಾತ್ರಿ ಅಬುಧಾಬಿಯಿಂದಲೂ 213 ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯದೊಂದಿಗೆ ಈ ‘ರೆಸ್ಕ್ಯೂ ಮಿಷನ್’ ಸಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !