April 9, 2026
Thursday, April 9, 2026
spot_img

INCA Awards 2026 | ‘ಕಾಂತಾರ’ಗೆ ಸಿಕ್ತು ಭರ್ಜರಿ ಅವಾರ್ಡ್: ಇನ್ಯಾರಿಗೆಲ್ಲ ಸಿಕ್ಕಿದೆ? ಇಲ್ಲಿದೆ ಡಿಟೇಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ವರ್ಷದ ಐಎನ್‌ಸಿಎ ಅವಾರ್ಡ್ಸ್–2026ರ ಘೋಷಣೆಯೊಂದಿಗೆ ಭಾರತೀಯ ಸಿನಿರಂಗದಲ್ಲಿ ಹೊಸ ಸಂಭ್ರಮ ಮನೆ ಮಾಡಿದೆ. ಹಲವು ಭಾಷೆಗಳ ಚಿತ್ರಗಳು ಸ್ಪರ್ಧಿಸಿದ್ದ ಈ ಪ್ರಶಸ್ತಿ ಪಟ್ಟಿಯಲ್ಲಿ ಕನ್ನಡ ಸಿನಿಮಾ ಭರ್ಜರಿ ಮೆರಗು ತೋರಿದ್ದು, ‘ಕಾಂತಾರ – ಎ ಲೆಜೆಂಡ್ ಚಾಪ್ಟರ್ 1’ ಸಿನಿಮಾ ಪ್ರಮುಖ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಭಾರತೀಯ ರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಪ್ರಕಟಿಸಿದ ಫಲಿತಾಂಶದಲ್ಲಿ 12 ಭಾಷೆಗಳು ಮತ್ತು 12 ಚಿತ್ರೋದ್ಯಮಗಳನ್ನು ಒಳಗೊಂಡಂತೆ ಒಟ್ಟು 25 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಕನ್ನಡ ವಿಭಾಗದಲ್ಲಿ ‘ಕಾಂತಾರ’ ಚಿತ್ರವೇ ಸಂಪೂರ್ಣ ಮೇಲುಗೈ ಸಾಧಿಸಿದೆ. ಅತ್ಯುತ್ತಮ ಚಿತ್ರ ಪ್ರಶಸ್ತಿ ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿರುವ ಈ ಸಿನಿಮಾಗೆ ಲಭಿಸಿದೆ.

ಇದೇ ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಂದಿದ್ದು, ಅತ್ಯುತ್ತಮ ನಿರ್ದೇಶಕ ಗೌರವವೂ ಅವರ ಪಾಲಾಗಿದೆ. ನಾಯಕಿ ರುಕ್ಮಿಣಿ ವಸಂತ್ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಇದರಿಂದ ಕನ್ನಡ ಸಿನಿರಂಗಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ ಸಿಕ್ಕಂತಾಗಿದೆ.

ಐಎನ್‌ಸಿಎ ಅವಾರ್ಡ್ಸ್ 2026: ವಿವಿಧ ಭಾಷೆಗಳ ವಿಜೇತರ ಪಟ್ಟಿ ಇಲ್ಲಿದೆ

ತೆಲುಗು

ಅತ್ಯುತ್ತಮ ಚಲನಚಿತ್ರ: ಮಿರಾಯ್ ಸೂಪರ್ ಯೋಧಾ (ಪೀಪಲ್ ಮೀಡಿಯಾ ಫ್ಯಾಕ್ಟರಿ)
ಅತ್ಯುತ್ತಮ ನಟ: ನಾಗ ಚೈತನ್ಯ (ತಾಂಡೇಲ್)
ಅತ್ಯುತ್ತಮ ನಟಿ: ರಶ್ಮಿಕಾ ಮಂದಣ್ಣ (ದಿ ಗರ್ಲ್ ಫ್ರೆಂಡ್)
ಅತ್ಯುತ್ತಮ ನಿರ್ದೇಶಕ: ಅನಿಲ್ ರವಿಪುಡಿ (ಸಂಕ್ರಾಂತಿಕೀ ವಾರಂ)

ಇದನ್ನೂ ಓದಿ:

ಹಿಂದಿ

ಅತ್ಯುತ್ತಮ ಚಲನಚಿತ್ರ: ಛಾವ (ದಿನೇಶ್ ವಿಜನ್ ಮತ್ತು ಮ್ಯಾಡಾಕ್ ಫಿಲ್ಮ್ಸ್)
ಅತ್ಯುತ್ತಮ ನಟ: ರಣವೀರ್ ಸಿಂಗ್ (ಧುರಂಧರ್)
ಅತ್ಯುತ್ತಮ ನಟಿ: ಯಾಮಿ ಗೌತಮ್ ಧರ್ (ಹಕ್)
ಅತ್ಯುತ್ತಮ ನಿರ್ದೇಶಕ: ಆದಿತ್ಯ ಧರ್ (ಧುರಂಧರ್)

ಮಲಯಾಳಂ

ಅತ್ಯುತ್ತಮ ಚಲನಚಿತ್ರ: ಲೋಕ ಅಧ್ಯಾಯ 1: ಚಂದ್ರ (ವೇಫೇರರ್ ಫಿಲ್ಮ್ಸ್)
ಅತ್ಯುತ್ತಮ ನಟ: ನಿವಿನ್ ಪೌಲಿ (ಸರ್ವಂ ಮಾಯಾ)
ಅತ್ಯುತ್ತಮ ನಟಿ: ಕಲ್ಯಾಣಿ ಪ್ರಿಯದರ್ಶನ್ (ಲೋಕ ಅಧ್ಯಾಯ 1: ಚಂದ್ರ)
ಅತ್ಯುತ್ತಮ ನಿರ್ದೇಶಕ: ಡೊಮಿನಿಕ್ ಅರುಣ್ (ಲೋಕ ಅಧ್ಯಾಯ 1: ಚಂದ್ರ)

ತಮಿಳು

ಅತ್ಯುತ್ತಮ ಚಲನಚಿತ್ರ: ಟೂರಿಸ್ಟ್ ಫ್ಯಾಮಿಲಿ (ಮಿಲಿಯನ್ ಡಾಲರ್ ಸ್ಟುಡಿಯೋಸ್, ಎಂಆರ್‌ಪಿ ಎಂಟರ್‌ಟೈನ್‌ಮೆಂಟ್)
ಅತ್ಯುತ್ತಮ ನಟ: ದುಲ್ಖರ್ ಸಲ್ಮಾನ್ (ಕಾಂತಾ)
ಅತ್ಯುತ್ತಮ ನಟಿ: ಸಿಮ್ರಾನ್ (ಟೂರಿಸ್ಟ್ ಫ್ಯಾಮಿಲಿ)
ಅತ್ಯುತ್ತಮ ನಿರ್ದೇಶಕ: ಟಿ. ಸೆಲ್ವರಾಜ್ (ಬೈಸನ್ ಕಲಮದನ್)

ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 16ರಂದು ಮುಂಬೈನಲ್ಲಿ ನಡೆಯಲಿದ್ದು, ದೇಶದ ಪ್ರಮುಖ ಸಿನಿಮಾ ತಾರೆಯರು ಹಾಗೂ ನಿರ್ದೇಶಕರು ಭಾಗವಹಿಸುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !