ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ ಮತ್ತೊಂದು ಹೈವೋಲ್ಟೇಜ್ ಪಂದ್ಯಕ್ಕೆ ಚೆಪಾಕ್‌ನ ಎಂ.ಎ. ಚಿದಂಬರಂ ಕ್ರೀಡಾಂಗಣ ಸಜ್ಜಾಗಿದೆ. ಐದು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮೂರು ಬಾರಿ ಟ್ರೋಫಿ ಗೆದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಇಂದು ಮುಖಾಮುಖಿಯಾಗಿವೆ.
ಟಾಸ್ ಗೆದ್ದ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಚೆನ್ನೈಗೆ ಮೊದಲು ಬ್ಯಾಟಿಂಗ್ ಮಾಡುವ ಸವಾಲು ಎದುರಾಗಿದೆ.
ಇದನ್ನೂ ಓದಿ:
ಈ ಆವೃತ್ತಿಯಲ್ಲಿ ಇನ್ನೂ ಗೆಲುವಿನ ಖಾತೆ ತೆರೆಯದ ಕೆಕೆಆರ್ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಮಳೆಯಿಂದ ರದ್ದಾದ ಒಂದೇ ಪಂದ್ಯದಿಂದ ಒಂದು ಅಂಕ ಪಡೆದಿರುವ ಕೋಲ್ಕತ್ತಾ, ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಗೆಲುವು ಅನಿವಾರ್ಯವಾಗಿದೆ. ಇನ್ನೊಂದೆಡೆ ಸತತ ಸೋಲುಗಳ ಬಳಿಕ ಡೆಲ್ಲಿ ವಿರುದ್ಧ ಜಯ ಸಾಧಿಸಿದ ಸಿಎಸ್‌ಕೆ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿದಿದೆ.
ಮುಖಾಮುಖಿ ದಾಖಲೆ ನೋಡಿದರೆ ಸಿಎಸ್‌ಕೆ ಸ್ಪಷ್ಟ ಮೇಲುಗೈ ಹೊಂದಿದೆ. ಈವರೆಗೆ ಎರಡೂ ತಂಡಗಳು 32 ಬಾರಿ ಎದುರಾಗಿದ್ದು, ಚೆನ್ನೈ 20 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಕೆಕೆಆರ್ 11 ಪಂದ್ಯಗಳಲ್ಲಿ ಮಾತ್ರ ಗೆದ್ದಿದ್ದು, ಒಂದು ಪಂದ್ಯ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ. ವಿಶೇಷವಾಗಿ ಚೆಪಾಕ್‌ನಲ್ಲಿ ಚೆನ್ನೈ ಬಲಿಷ್ಠ ದಾಖಲೆ ಹೊಂದಿದ್ದು, 10 ಪಂದ್ಯಗಳಲ್ಲಿ 8 ಗೆಲುವು ಪಡೆದಿದೆ.



