September 27, 2026
Sunday, September 27, 2026
spot_img

ಅಮೆರಿಕ ದಿಗ್ಭಂಧನಕ್ಕೆ ಡೋಂಟ್ ಕೇರ್: ಹಾರ್ಮುಜ್ ದಾಟಿದ 2 ಹಡಗು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ ನಡುವೆಯೂ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ಸಂಪೂರ್ಣ ಸ್ಥಗಿತವಾಗಿಲ್ಲ ಎಂಬುದು ಇತ್ತೀಚಿನ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.

ಅಮೆರಿಕ ಘೋಷಿಸಿದ ನೌಕಾ ದಿಗ್ಬಂಧನದ ನಡುವೆಯೂ ಸೋಮವಾರ ಕನಿಷ್ಠ ಎರಡು ಹಡಗುಗಳು ಈ ಪ್ರಮುಖ ಜಲಮಾರ್ಗವನ್ನು ಯಶಸ್ವಿಯಾಗಿ ದಾಟಿವೆ ಎಂದು ಸಾಗರ ಟ್ರ್ಯಾಕಿಂಗ್ ಡೇಟಾ ತಿಳಿಸಿದೆ.

ಲೈಬೀರಿಯಾ ಧ್ವಜ ಹೊಂದಿದ್ದ ಬೃಹತ್ ಸರಕು ನೌಕೆ ಕ್ರಿಸ್ಟಿಯಾನ್ನಾ ಇರಾನ್ ನ ಬಂದರ್ ಇಮಾಮ್ ಖೊಮೇನಿ ಬಂದರಿನಲ್ಲಿ ಜೋಳ ಇಳಿಸಿದ ಬಳಿಕ ಹಾರ್ಮುಜ್ ಜಲಸಂಧಿ ಮೂಲಕ ಹೊರಟಿತು. ಅದೇ ವೇಳೆ ಕೊಮೊರೊಸ್ ಧ್ವಜದ ಟ್ಯಾಂಕರ್ ಎಲ್ಪಿಸ್ ಕೂಡ ಲಾರಕ್ ದ್ವೀಪದ ಸಮೀಪದಿಂದ ಸಾಗಿದ್ದು, ಮೆಥನಾಲ್ ಸರಕು ಸಾಗಣೆ ಮಾಡುತ್ತಿತ್ತು ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ:

ಇದಕ್ಕೂ ಜೊತೆಗೆ ಚೀನಾ ಸಂಪರ್ಕ ಹೊಂದಿರುವ ರಿಚ್ ಸ್ಟಾರಿ ಟ್ಯಾಂಕರ್ ಕೂಡ ಜಲಸಂಧಿ ದಾಟಿರುವ ಮಾಹಿತಿ ಲಭ್ಯವಾಗಿದೆ. ಈ ಹಡಗು ಸುಮಾರು 31,500 ಟನ್ ಮೆಥನಾಲ್ ಹೊತ್ತು ಓಮನ್ ದಿಕ್ಕಿಗೆ ಪ್ರಯಾಣಿಸಿತು ಎಂದು ಸಾಗರ ಡೇಟಾ ಕಂಪನಿಗಳು ತಿಳಿಸಿವೆ.

ಅಮೆರಿಕದ ದಿಗ್ಬಂಧನ ಘೋಷಣೆಯ ನಡುವೆಯೂ ಹಡಗುಗಳ ಸಂಚಾರ ಮುಂದುವರಿದಿರುವುದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕುತೂಹಲ ಹುಟ್ಟಿಸಿದೆ.

Must Read