April 19, 2026
Sunday, April 19, 2026
spot_img

ರಾಮಾಯಣದ ಬಗ್ಗೆ ಕಾಂಟ್ರವರ್ಶಿಯಲ್‌ ಹೇಳಿಕೆ ಕೊಟ್ಟ ಪ್ರಕಾಶ್‌ ರಾಜ್‌ ವಿರುದ್ಧ ಕ್ರಿಮಿನಲ್‌ ಕೇಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಮಾಯಣದ ಬಗ್ಗೆ ಕಾಂಟ್ರವರ್ಶಿಯಲ್‌ ಹೇಳಿಕೆ ಕೊಟ್ಟ ನಟ ಪ್ರಕಾಶ್‌ ರಾಜ್‌ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಾಗಿದೆ.

ಕಾರ್ಯಕ್ರಮವೊಂದರಲ್ಲಿ ಪ್ರಕಾಶ್‌ ರಾಜ್‌ ರಾಮನನ್ನು ಉತ್ತರ ಭಾರತೀಯ ಎಂದು ಹೇಳಿದ್ದಾರೆ. ರಾವಣನ ಪ್ರದೇಶವಾದ ದಕ್ಷಿಣಕ್ಕೆ ರಾಮ ತನ್ನ ಪತ್ನಿ ಹಾಗೂ ಸಹೋದರನ ಜೊತೆ ಬಂದಿದ್ದರು ಎಂದು ಹೇಳಿದ್ದಾರೆ. ಇದು ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡಿದೆ.

ರಾಮ, ಸೀತೆ, ಲಕ್ಷ್ಮಣ ರಾವಣನ ಜಾಗದಲ್ಲಿ ಹಣ್ಣು ತಿಂದಿದ್ದರು. ಆಗ ಶೂರ್ಪನಖಿ ನೋಡಿ ರಾವಣನಿಗೆ ತಿಳಿಸಿದ್ದರು. ರಾವಣ ಏನೂ ಮಾಡಲಿಲ್ಲ. ನಂತರ ಶೂರ್ಪನಖಿ ಹಣ್ಣನ್ನು ತಿಂದಿದ್ದಕ್ಕೆ ಹಣ ಕೇಳಿದ್ದರು. ಆಗ ರಾಮ ನಾವಿನ್ನೂ ಹದಿನಾಲ್ಕು ವರ್ಷ ಇಲ್ಲೇ ಇರುವವರು. ದುಡ್ಡು ಕೊಡೋದಿಲ್ಲ ಎಂದು ಹೇಳಿದ್ದರು ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ರಾಮ ಲಕ್ಷ್ಮಣರ ಮನವಿ ಪರಿಗಣಿಸಿದ ರಾವಣ ಶೂರ್ಪನಖಿಗೆ ಡಿಸ್ಕೌಂಟ್‌ ನೀಡುವಂತೆ ಹೇಳಿದ್ದರಂತೆ ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ. ದುಡ್ಡೇ ಇಲ್ಲದ ರಾಮ ಹಾಗೂ ಕುಟುಂಬಕ್ಕೆ ಎಷ್ಟು ಡಿಸ್ಕೌಂಟ್‌ ಆದರೂ ಏನು ಪ್ರಯೋಜನ ಎಂದು ತಮಾಷೆಯಾಗಿ ಮಾತನಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !