April 22, 2026
Wednesday, April 22, 2026
spot_img

ತನ್ನ ವೆದರ್‌ಗೇ ಫೇಮಸ್‌ ಆಗಿದ್ದ ಬೆಂಗಳೂರಿಗೆ ದೃಷ್ಟಿ ಬಿದ್ದಂಗಿದೆ! ಮೂರು ಡಿಗ್ರಿ ತಾಪಮಾನ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತನ್ನ ವೆದರ್‌ನಿಂದಲೇ ಫೇಮಸ್‌ ಆಗಿದ್ದ ಬೆಂಗಳೂರು ಇದೀಗ ರಾಜ್ಯದ ಯಾವುದೇ ಬಿಸಿಲು ಜಿಲ್ಲೆಯಂತೆ ಬದಲಾಗಿದೆ. ರಾಜಧಾನಿಯ ಜನ ಫ್ಯಾನ್‌ ಆಫ್‌ ಮಾಡದೇ ತಿಂಗಳುಗಳಾಗಿವೆ. ಈಗ್ಲೋ ಆಗ್ಲೋ ಬೇಸಿಗೆ ಮುಗಿಯುತ್ತೆ ಅಂದ್ಕೊಂಡಿದ್ದ ಜನರಿಗೆ ಶಾಕ್‌ ಆಗಿದ್ದು, ಈ ಬಾರಿ ಸಾಮಾನ್ಯಕ್ಕಿಂತ ಮೂರು ಡಿಗ್ರಿ ತಾಪಮಾನ ಹೆಚ್ಚಾಗಿದೆ.

ಬೆಂಗಳೂರಿನ ಗರಿಷ್ಠ ತಾಪಮಾನ ಇದೀಗ 36.5 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಇದು ಏಪ್ರಿಲ್‌ ಮಧ್ಯದಲ್ಲಿ ಇರಬೇಕಾದ ಟೆಂಪರೇಚರ್‌ ಅಲ್ಲ. ಸಾಮಾನ್ಯ ಮಟ್ಟಕ್ಕಿಂತ ಸುಮಾರು 2.3 ಡಿಗ್ರಿ ಹೆಚ್ಚಾಗಿದೆ.

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಗರಿಷ್ಠ ತಾಪಮಾನ ಅಂದರೆ 36.8 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿದೆ. ಭಾರತದಲ್ಲಿ ಉಂಟಾಗಿರುವ ಬಲವಾದ ಚಂಡಮಾರುತ ವಿರುದ್ಧ ಚಲನವಲನ ಈ ವೆದರ್‌ಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !