June 15, 2026
Monday, June 15, 2026
spot_img

Fitness Check | ನಿಮ್ಮ ಬಾಡಿ ನಿಜವಾಗಿಯೂ ಫಿಟ್ ಇದೆಯಾ? ಹೀಗೆ ಚೆಕ್ ಮಾಡಿ

ಫಿಟ್ ಆಗಿದ್ದೇವೆ ಅನ್ನೋದನ್ನು ಕೇವಲ ತೂಕದ ಸಂಖ್ಯೆಯಿಂದ ಅಳೆಯಲು ಸಾಧ್ಯವಿಲ್ಲ. ಸ್ಲಿಮ್ ಆಗಿದ್ದರೂ ದೇಹ ಒಳಗಿನಿಂದ ಫಿಟ್ ಇರದೇ ಇರಬಹುದು. ಸ್ವಲ್ಪ ತೂಕ ಹೆಚ್ಚಿದ್ದರೂ ಆರೋಗ್ಯಕರವಾಗಿ ಇರಬಹುದು. ಹಾಗಾದರೆ ನಿಮ್ಮ ಬಾಡಿ ನಿಜವಾಗಿಯೂ ಫಿಟ್ ಇದೆಯಾ ಅನ್ನೋದನ್ನು ಹೇಗೆ ತಿಳಿಯೋದು? ಕೆಲವು ಸರಳ ಲಕ್ಷಣಗಳು ಇದಕ್ಕೆ ಉತ್ತರ ಕೊಡುತ್ತವೆ.

ದಿನಪೂರ್ತಿ ಎನರ್ಜಿ ಇದೆಯಾ?
ಬೆಳಿಗ್ಗೆ ಎದ್ದ ತಕ್ಷಣ ದಣಿವು, ಸುಸ್ತು ಅನ್ನಿಸದೇ ದಿನಪೂರ್ತಿ ಚುರುಕಾಗಿ ಇದ್ದರೆ ಅದು ಉತ್ತಮ ಫಿಟ್ನೆಸ್‌ನ ಸೂಚನೆ. ಸಣ್ಣ ಕೆಲಸಕ್ಕೂ ಉಸಿರಾಟ ಹೆಚ್ಚಾದರೆ ದೇಹಕ್ಕೆ ಇನ್ನಷ್ಟು ಚಲನೆ ಬೇಕು ಅನ್ನೋ ಸಂಕೇತ.

ಮೆಟ್ಟಿಲು ಹತ್ತಿದಾಗ ಹೇಗಿರುತ್ತೆ?
ಎರಡು ಮಹಡಿ ಮೆಟ್ಟಿಲು ಹತ್ತಿದಾಗಲೇ ಉಸಿರು ಬಿಗಿಯಾದರೆ ಕಾರ್ಡಿಯೊ ಫಿಟ್ನೆಸ್ ಹೆಚ್ಚಿಸಿಕೊಳ್ಳಬೇಕು. ಸುಲಭವಾಗಿ ಹತ್ತಬಲ್ಲಿರಿ ಅಂದ್ರೆ ನಿಮ್ಮ ಹೃದಯ ಮತ್ತು ಸ್ಟಾಮಿನಾ ಚೆನ್ನಾಗಿದೆ.

ಇದನ್ನೂ ಓದಿ:

ನಿದ್ರೆ ಮತ್ತು ಹಸಿವು ಸರಿಯಿದೆಯಾ?
ರಾತ್ರಿ ಚೆನ್ನಾಗಿ ನಿದ್ರೆ ಬರುವುದು, ಸಮಯಕ್ಕೆ ಹಸಿವು ಆಗುವುದು ದೇಹದ ಮೆಟಾಬಾಲಿಸಂ ಸರಿಯಾಗಿ ಕೆಲಸ ಮಾಡುತ್ತಿದೆ ಅನ್ನೋ ಸೂಚನೆ.

ದೇಹ ಬಗ್ಗುತ್ತಾ?
ನೆಲಕ್ಕೆ ಕೈ ಮುಟ್ಟೋದು, ಕುಳಿತು ಎದ್ದೇಳೋದು, ಸ್ವಲ್ಪ ಸ್ಟ್ರೆಚ್ ಮಾಡಿದಾಗ ದೇಹ ತುಂಬಾ ಗಟ್ಟಿಯಾಗಿ ಅನ್ನಿಸದಿದ್ದರೆ ಫ್ಲೆಕ್ಸಿಬಿಲಿಟಿ ಚೆನ್ನಾಗಿದೆ.

ಮನಸ್ಸೂ ಫಿಟ್ ಇರಬೇಕು
ಸ್ಟ್ರೆಸ್ ಹ್ಯಾಂಡಲ್ ಮಾಡೋ ಸಾಮರ್ಥ್ಯ, ದಿನಪೂರ್ತಿ ಒಳ್ಳೆಯ ಮೂಡ್ ಇರುವುದು ಕೂಡ ಫಿಟ್ನೆಸ್‌ನ ಭಾಗವೇ.

ಫಿಟ್ನೆಸ್ ಅಂದ್ರೆ ಕೇವಲ ಕನ್ನಡಿ ಮುಂದೆ ಕಾಣೋ ದೇಹವಲ್ಲ… ದೇಹ, ಮನಸ್ಸು ಮತ್ತು ಎನರ್ಜಿ – ಈ ಮೂರೂ ಬ್ಯಾಲೆನ್ಸ್ ಆಗಿರುವ ಸ್ಥಿತಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !