May 6, 2026
Wednesday, May 6, 2026
spot_img

PHONE | ನಿಮ್ಮ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಚಾರ್ಜಿಂಗ್ ಮಾಡುವಾಗ ಈ ತಪ್ಪು ಮಾಡಬೇಡಿ

ಇತ್ತೀಚಿನ ದಿನದಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದೆ. ಯಾರ ಕೈ ನೋಡಿದರೂ ಮೊಬೈಲ್ ಇದ್ದೇ ಇರುತ್ತದೆ. ಆದರೆ ಅನೇಕರಿಗೆ ಮೊಬೈಲ್ ಬಗ್ಗೆ ಹಲವು ಮಾಹಿತಿಗಳು ಗೊತ್ತೇ ಇರುವುದಿಲ್ಲ. ಅದರಲ್ಲಿ ಪ್ರಮುಖವಾಗಿ ಒಂದು ದಿನದಲ್ಲಿ ಎಷ್ಟು ಬಾರಿ ಚಾರ್ಜ್ ಮಾಡಬೇಕು? ಎಷ್ಟು ಪರ್ಸೆಂಟೇಜ್ ಚಾರ್ಜ್ ಮಾಡಬೇಕೆಂದು ತಿಳಿದಿರುವುದೇ ಇಲ್ಲ. ಫೋನ್ ಚಾರ್ಜ್ ಮಾಡುವಾಗ ಕೆಲವೊಂದು ಟಿಪ್ಸ್ಗಳನ್ನು ಪಾಲಿಸಿದರೆ ಮೊಬೈಲ್ ಬ್ಯಾಟರಿ ಹಾಳಾಗುವುದಿಲ್ಲ ಮತ್ತು ಫೋನ್ ಹೆಚ್ಚು ಕಾಲ ಬಳಸಬಹುದು..

ಅನೇಕ ಜನರು ಮೊಬೈಲ್ ಚಾರ್ಜ್ ಖಾಲಿ ಆಗುವವರೆಗೆ ಮೊಬೈಲ್ ಯೂಸ್ ಮಾಡುತ್ತಲೇ ಇರುತ್ತಾರೆ. ಇನ್ನೂ ಕೆಲವರು 5 ಪರ್ಸೆಂಟ್ ಇರುವವರೆಗೆ ಮೊಬೈಲ್ ಬಳಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಫೋನಿನ ಬ್ಯಾಟರಿ ಬೇಗ ಹಾಳಾಗುತ್ತದೆ.

ಇನ್ನು 100 ಪರ್ಸೆಂಟ್ವರೆಗೂ ಮೊಬೈಲ್ ಚಾರ್ಜ್ ಆದ್ರೂ ಜನ ಇನ್ನೂ ಮೊಬೈಲನ್ನು ಚಾರ್ಜ್ನಲ್ಲೇ ಇಟ್ಟಿರುತ್ತಾರೆ. ಆದರೆ ಈ ರೀತಿ ಚಾರ್ಜ್ ಇಟ್ಟರೆ ಮತ್ತು ಪದೇ ಪದೇ ಚಾರ್ಜ್ ಮಾಡುತ್ತಿದ್ದರೆ ಫೋನ್ ಬ್ಯಾಟರಿ ಹಾಳಾಗುತ್ತದೆ.

ಮೊಬೈಲ್ ಚಾರ್ಜ್ 20 ಪರ್ಸೆಂಟ್ಗಿಂತ ಕಡಿಮೆಯಾದ ಮೇಲೆ ಮೊಬೈಲ್ ಯೂಸ್ ಮಾಡಲು ಹೋಗಬಾರದು. ಇದರಿಂದ ಬ್ಯಾಟರಿ ಮೇಲೆ ಒತ್ತಡ ಜಾಸ್ತಿಯಾಗುತ್ತದೆ. ಹಾಗಾಗಿ ಮೊಬೈಲ್ ಚಾರ್ಜ್ 20 ಪರ್ಸೆಂಟ್ಗಿಂದ ಇಳಿದ ತಕ್ಷಣ ಚಾರ್ಜ್ಗೆ ಇಡಬೇಕು.

ಫೋನ್ ಬ್ಯಾಟರಿಯನ್ನು ಶೇ 80 ರಿಂದ 90 ರಷ್ಟು ಚಾರ್ಜ್ ಮಾಡಬೇಕು. ಒಂದು ವೇಳೆ 100 ಪರ್ಸೆಂಟ್ನಷ್ಟು ಚಾರ್ಜ್ ಮಾಡಿದರೆ ಆಗಲೂ ಬ್ಯಾಟರಿ ಮೇಲಿನ ಒತ್ತಡ ಜಾಸ್ತಿಯಾಗುತ್ತದೆ.

ಯಾವಾಗಲೂ ನಿಮ್ಮ ಫೋನ್‌ನೊಂದಿಗೆ ಬಂದ ಚಾರ್ಜರ್ ಮತ್ತು ಕೇಬಲ್‌ಗಳನ್ನೆ ಬಳಸಿ. ಬೇರೆ ಚಾರ್ಜರ್‌ಗಳು ಬ್ಯಾಟರಿಯನ್ನು ಹಾಳುಮಾಡಬಹುದು.

ಫೋನ್ ಅನ್ನು ರಾತ್ರಿಯಿಡೀ ಚಾರ್ಜ್‌ಗೆ ಹಾಕಿ ಮಲಗಬೇಡಿ. ಇದು ಬ್ಯಾಟರಿಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಅತಿಯಾದ ಶಾಖಕ್ಕೆ ಕಾರಣವಾಗಬಹುದು.

ಚಾರ್ಜ್ ಆಗುತ್ತಿರುವಾಗ ಗೇಮ್ ಆಡುವುದು ಅಥವಾ ವಿಡಿಯೋ ನೋಡುವುದರಿಂದ ಫೋನ್ ಅತಿಯಾಗಿ ಬಿಸಿಯಾಗುತ್ತದೆ. ಆಗ ಬ್ಯಾಟರಿಗೆ ಒತ್ತಡ ಬೀಳುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !