ವಸಂತ ಕಾಲದ ಸೊಬಗುನ್ನು ತುಂಬಿರುವ ಮೇ ತಿಂಗಳಲ್ಲಿ ಜನಿಸಿದವರು ಸೂರ್ಯನ ತೇಜಸ್ಸಿನಂತೆ ಪ್ರಖರವಾದ ಬುದ್ಧಿಶಕ್ತಿ ಮತ್ತು ಅಚಲವಾದ ಆತ್ಮವಿಶ್ವಾಸವನ್ನು ಹೊಂದಿರುತ್ತಾರೆ ಎಂಬುವುದು ಹಲವರ ನಂಬಿಕೆ. ಆಕರ್ಷಕ ನಡವಳಿಕೆ, ಸೃಜನಶೀಲ ಆಲೋಚನೆ ಹಾಗೂ ಗುರಿ ತಲುಪುವ ಛಲ ಇವರ ರಕ್ತದಲ್ಲೇ ಇರುತ್ತದೆ. ಮೇ ತಿಂಗಳಲ್ಲಿ ಜನಿಸಿದವರು ತಮ್ಮ ಸುತ್ತಲಿರುವವರನ್ನು ಸುಲಭವಾಗಿ ಪ್ರಭಾವಿಸುವ ಕಲೆ ಹೊಂದಿದ್ದು, ಜೀವನದ ಸವಾಲುಗಳನ್ನು ಧೈರ್ಯವಾಗಿ ಎದುರಿಸುವ ಗುಣದವರಾಗಿರುತ್ತಾರೆ. ಇವರ ವ್ಯಕ್ತಿತ್ವದ ಬಗ್ಗೆ ಇನ್ನಷ್ಟು ತಿಳಿಯೋಣ.
ಮೇ ತಿಂಗಳಲ್ಲಿ ಜನಿಸಿದವರ ಗುಣಲಕ್ಷಣಗಳು:
ಮೇ ತಿಂಗಳಲ್ಲಿ ಜನಿಸಿದವರು ತುಂಬಾ ಹಠವಾದಿಗಳು ಮತ್ತುಅಂದುಕೊಂಡ ಕೆಲಸವನ್ನು ಸಾಧಿಸುವ ಛಲ ಹೊಂದಿರುವವರು. ಇವರು ಯಾವುದನ್ನಾದರೂ ಮಾಡಬೇಕೆಂದುಕೊಂಡರೆ, ಎಷ್ಟೇ ಅಡೆತಡೆಗಳು ಬಂದರೂ ಅದನ್ನು ಪೂರ್ಣಗೊಳಿಸುತ್ತಾರೆ.
ಇವರು ತಮ್ಮ ಸುತ್ತಲಿನ ಜನರನ್ನು ಸುಲಭವಾಗಿ ಆಕರ್ಷಿಸುವ ಶಕ್ತಿ ಹೊಂದಿರುತ್ತಾರೆ. ಇವರ ಮಾತು ಮತ್ತು ನಡವಳಿಕೆ ಇತರರಿಗೆ ಇಷ್ಟವಾಗುತ್ತದೆ, ಹಾಗಾಗಿ ಇವರಿಗೆ ಸ್ನೇಹಿತರ ಬಳಗ ದೊಡ್ಡದಾಗಿರುತ್ತದೆ.
ಇವರು ಸ್ವಲ್ಪ ಬೇಗನೆ ಕೋಪಿಸಿಕೊಳ್ಳುತ್ತಾರೆ. ಸಣ್ಣ ವಿಷಯಗಳಿಗೂ ಬೇಗ ಪ್ರತಿಕ್ರಿಯಿಸಬಹುದು. ಆದರೆ, ಇವರು ಅಷ್ಟೇ ಬೇಗನೆ ಶಾಂತವಾಗುತ್ತಾರೆ ಮತ್ತು ಮನಸ್ಸಿನಲ್ಲಿ ದ್ವೇಷ ಇಟ್ಟುಕೊಳ್ಳುವುದಿಲ್ಲ.
ಇವರಿಗೆ ಪ್ರವಾಸ ಮಾಡುವುದನ್ನು ಮತ್ತು ಹೊಸ ಜಾಗಗಳನ್ನು ಹುಡುಕುವುದೆಂದರೆ ತುಂಬಾ ಇಷ್ಟ . ಇವರು ಒಂದೇ ಕಡೆ ಸುಮ್ಮನೆ ಕುಳಿತುಕೊಳ್ಳಲು ಇಷ್ಟಪಡುವುದಿಲ್ಲ.
ಇವರು ಸೋಮಾರಿಗಳಲ್ಲ. ತಮ್ಮ ಗುರಿಯನ್ನು ತಲುಪಲು ಎಷ್ಟು ಬೇಕಾದರೂ ಶ್ರಮ ಪಡುತ್ತಾರೆ. ವೃತ್ತಿಜೀವನದಲ್ಲಿ ಇವರು ಸಾಮಾನ್ಯವಾಗಿ ಯಶಸ್ವಿಯಾಗುತ್ತಾರೆ.
ಇವರು ಹಣವನ್ನು ಹೇಗೆ ಖರ್ಚು ಮಾಡಬೇಕು ಮತ್ತು ಹೇಗೆ ಉಳಿಸಬೇಕು ಎಂಬ ಬಗ್ಗೆ ಸ್ಪಷ್ಟ ಅರಿವು ಹೊಂದಿರುತ್ತಾರೆ. ಅತಿಯಾಗಿ ಖರ್ಚು ಮಾಡಿದರೂ, ತಮ್ಮ ಅಗತ್ಯಗಳಿಗಾಗಿ ಹಣವನ್ನು ಕೂಡಿಟ್ಟಿರುತ್ತಾರೆ.



