May 10, 2026
Sunday, May 10, 2026
spot_img

CINE | ‘ಪೆದ್ದಿ’ ಟ್ರೇಲರ್ ಗೆ ಕಾಯ್ತಿದ್ದೀರಾ? ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ ನೋಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮ್ ಚರಣ್ ಅಭಿನಯದ ಬಹುನಿರೀಕ್ಷಿತ ಪೆದ್ದಿ ಬಿಡುಗಡೆಗೂ ಮುನ್ನವೇ ಸಿನಿ ವಲಯದಲ್ಲಿ ದೊಡ್ಡ ಮಟ್ಟದ ಸದ್ದು ಮಾಡುತ್ತಿದೆ. ಚಿತ್ರದ ಮೇಲಿನ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಭಿಮಾನಿಗಳ ಕುತೂಹಲ ತಾರಕ್ಕೇರಿದೆ. ಈಗ ಸಿನಿಮಾ ತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.

ಚಿತ್ರದ ಟ್ರೇಲರ್ ಅನಾವರಣ ಕಾರ್ಯಕ್ರಮ ಮೇ 16ರಂದು ಭೋಪಾಲ್ ನಲ್ಲಿ ನಡೆಯಲಿದ್ದು, ಇದನ್ನು ದೊಡ್ಡ ಮಟ್ಟದ ಸಿನಿ ಸಂಭ್ರಮವಾಗಿ ಆಯೋಜಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರದ ಪ್ರಮುಖ ಕಲಾವಿದರು ಹಾಗೂ ತಾಂತ್ರಿಕ ತಂಡ ಭಾಗವಹಿಸುವ ನಿರೀಕ್ಷೆ ಇದೆ. ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ವಿಶೇಷ ಸಂಗೀತ ಪ್ರದರ್ಶನವೂ ಕಾರ್ಯಕ್ರಮದ ಆಕರ್ಷಣೆಯಾಗಲಿದೆ ಎನ್ನಲಾಗಿದೆ.

ಇದನ್ನೂ ಓದಿ:

ಇನ್ನೊಂದೆಡೆ, ವಿದೇಶಿ ಮಾರುಕಟ್ಟೆಯಲ್ಲೂ ಪೆದ್ದಿ ಭರ್ಜರಿ ಆರಂಭ ಕಂಡಿದೆ. ಉತ್ತರ ಅಮೆರಿಕದಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಚಿತ್ರದ ಮೇಲಿನ ಜಾಗತಿಕ ನಿರೀಕ್ಷೆಯನ್ನು ಇದು ತೋರಿಸಿದೆ.

ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಮ್ ಚರಣ್ ಅವರ ಹೊಸ ಅವತಾರ, ಹಾಡುಗಳು ಮತ್ತು ಭಾರೀ ತಾರಾಗಣದಿಂದ ‘ಪೆದ್ದಿ’ ಈಗಾಗಲೇ ಸಿನಿಪ್ರೇಮಿಗಳ ಗಮನದ ಕೇಂದ್ರವಾಗಿದೆ. ಬಿಡುಗಡೆಗೂ ಮುನ್ನವೇ ಈ ಸಿನಿಮಾ ದೊಡ್ಡ ಹವಾ ಸೃಷ್ಟಿಸಿರುವುದು ವಿಶೇಷ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !