July 6, 2026
Monday, July 6, 2026
spot_img

ಖುಷಿ ದಿನಗಳನ್ನು ಕಳೆಯುತ್ತಿದ್ದ ರಾಮನಗರದ ಫಾರ್ಮ್‌ಹೌಸ್‌ನಲ್ಲಿ ದಿಲೀಪ್‌ ರಾಜ್‌ ಅಂತ್ಯಕ್ರಿಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಚಿತ್ರರಂಗದ ನಟ ದಿಲೀಪ್‌ ರಾಜ್‌ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಉತ್ತರಹಳ್ಳಿಯ ನಿವಾಸದಲ್ಲಿ ನಟನ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ ರಾಮನಗರದ ಫಾರ್ಮ್‌ಹೌಸ್‌ ಬಳಿ ಅಂತ್ಯಕ್ರಿಯೆ ನಡೆಯಲಿದೆ.

ಗುನ್ನೂರು ಗ್ರಾಮದಲ್ಲಿ ಕೆಲ ವರ್ಷಗಳ ಹಿಂದೆ ದಿಲೀಪ್‌ ಜಾಗ ಖರೀದಿಸಿ ಮನೆ ಮಾಡಿದ್ದರು. ನೋವಿನಲ್ಲಿ ,ಖುಷಿಯಲ್ಲಿ ಕುಟುಂಬ ಇಲ್ಲಿ ಸಮಯ ಕಳೆಯುತ್ತಿತ್ತು. ಇದೀಗ ಇಲ್ಲಿಯೇ ಅಂತ್ಯಕ್ರಿಯೆಗೆ ನಿರ್ಧಾರ ಮಾಡಲಾಗಿದ್ದು, ಸಂಜೆ ನಾಲ್ಕು ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಸಿನಿಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ.

ಈಗಾಗಲೇ ಫಾರ್ಮ್‌ಹೌಸ್‌ಬಳಿ ಗುಂಡಿ ತೋಡುವ ಕಾರ್ಯ ನಡೆಯುತ್ತಿದ್ದು, ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !