ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ‘ಮೆಲೋಡಿ’ ಟಾಫಿ ಗಿಫ್ಟ್ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಇದೀಗ ಇದರ ಪ್ರಭಾವ ಷೇರು ಮಾರುಕಟ್ಟೆಯ ಮೇಲೂ ಕಂಡುಬಂದಿದೆ. ಮೆಲೋನಿ ಹಂಚಿಕೊಂಡ ವಿಡಿಯೋ ವೈರಲ್ ಆದ ಬೆನ್ನಲ್ಲೇ ‘ಪಾರ್ಲೆ’ ಹೆಸರಿನ ಕಂಪನಿಯ ಷೇರು ಬೆಲೆ ಏರಿಕೆ ಕಂಡಿದೆ.
‘ಪಾರ್ಲೆ’ ಹೆಸರೇ ಗೊಂದಲಕ್ಕೆ ಕಾರಣ
ಮೆಲೋಡಿ ಟಾಫಿಯನ್ನು ತಯಾರಿಸುವುದು ಪಾರ್ಲೆ ಪ್ರಾಡಕ್ಟ್ಸ್ ಕಂಪನಿ. ಆದರೆ ಈ ಸಂಸ್ಥೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿಲ್ಲ. ಇದರ ನಡುವೆಯೇ ‘ಪಾರ್ಲೆ ಇಂಡಸ್ಟ್ರೀಸ್’ ಎಂಬ ರಿಯಲ್ ಎಸ್ಟೇಟ್ ಕಂಪನಿಯ ಷೇರುಗಳಿಗೆ ಏಕಾಏಕಿ ಬೇಡಿಕೆ ಹೆಚ್ಚಾಗಿದೆ. ಹೆಸರಿನ ಸಾಮ್ಯದಿಂದ ಅನೇಕ ಹೂಡಿಕೆದಾರರು ಗೊಂದಲಕ್ಕೀಡಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:
ಒಂದೇ ದಿನದಲ್ಲಿ ಷೇರು ಬೆಲೆ ಜಿಗಿತ
ಕಳೆದ ಕೆಲ ತಿಂಗಳಿಂದ ಕುಸಿತದಲ್ಲಿದ್ದ ಪಾರ್ಲೆ ಇಂಡಸ್ಟ್ರೀಸ್ ಷೇರುಗಳು, ಬುಧವಾರ ಸುಮಾರು 5% ಏರಿಕೆ ಕಂಡಿವೆ. ಮೆಲೋಡಿ ಟಾಫಿ ಸುದ್ದಿ ವೈರಲ್ ಆದ ಬಳಿಕ ಹೂಡಿಕೆದಾರರ ಗಮನ ಈ ಕಂಪನಿಯತ್ತ ಸೆಳೆದಿದೆ.
ಮೋದಿ-ಮೆಲೋನಿ ಸ್ನೇಹ ಮತ್ತೆ ವೈರಲ್
ಮೋದಿ ಮತ್ತು ಮೆಲೋನಿ ನಡುವಿನ ಆತ್ಮೀಯತೆ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಚರ್ಚೆಯಾಗುತ್ತಿರುತ್ತದೆ. #Melody ಹ್ಯಾಶ್‌ಟ್ಯಾಗ್ ಮೂಲಕ ಇಬ್ಬರ ಹೆಸರನ್ನು ಜೋಡಿಸಿ ಪೋಸ್ಟ್‌ಗಳು ಹರಿದಾಡುತ್ತಿವೆ. ಈ ಹಿನ್ನೆಲೆ ಮೆಲೋಡಿ ಟಾಫಿ ಗಿಫ್ಟ್ ಮತ್ತಷ್ಟು ವೈರಲ್ ಆಗಿದೆ.



