ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಬಾಕಿ. ಆದರೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಈಗಾಗಲೇ ಬಾಕ್ಸ್ ಆಫೀಸ್ ಅಖಾಡಕ್ಕೆ ಎಂಟ್ರಿ ಕೊಟ್ಟಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಉತ್ಸಾಹ ಅಭಿಮಾನಿಗಳಲ್ಲಿ ಎಷ್ಟಿದೆ ಎಂಬುದಕ್ಕೆ ಮುಂಗಡ ಟಿಕೆಟ್ ಬುಕಿಂಗ್‌ನಲ್ಲೇ ಉತ್ತರ ಸಿಕ್ಕಿದೆ.
ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಸಾವಿರಾರು ಟಿಕೆಟ್‌ಗಳು ಮಾರಾಟವಾಗಿದ್ದು, ಇದೀಗ ಸಿನಿಮಾ ಹೊಸ ದಾಖಲೆಗಳತ್ತ ಹೆಜ್ಜೆ ಹಾಕುತ್ತಿದೆ.
ಬುಕಿಂಗ್ ಓಪನ್ ಆಗುತ್ತಿದ್ದಂತೆ ಟಿಕೆಟ್‌ಗೆ ಡಿಮ್ಯಾಂಡ್
ಆಗಸ್ಟ್ 21ರಂದು ಬೆಳಗ್ಗೆ 6 ಗಂಟೆಯಿಂದ ‘ಟಾಕ್ಸಿಕ್’ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಶುರುವಾಗಿತ್ತು. ಬುಕಿಂಗ್ ಆರಂಭವಾದ ಮೊದಲ ಎರಡು ದಿನಗಳಲ್ಲೇ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ ವಿವಿಧ ಭಾಷೆಗಳ ಪ್ರದರ್ಶನಗಳನ್ನು ಸೇರಿಸಿ 4.7 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ ಮುಂಗಡ ಬುಕಿಂಗ್‌ನ ಗ್ರಾಸ್ ಕಲೆಕ್ಷನ್ 18 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ.
ಕನ್ನಡ ಆವೃತ್ತಿಗೂ ಭರ್ಜರಿ ಬೇಡಿಕೆ
‘ಟಾಕ್ಸಿಕ್’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದರೂ ಕನ್ನಡ ಆವೃತ್ತಿಯ ಮೇಲಿನ ಪ್ರೇಕ್ಷಕರ ನಿರೀಕ್ಷೆ ಕಡಿಮೆಯಾಗಿಲ್ಲ. ಮುಂಗಡ ಬುಕಿಂಗ್‌ನಲ್ಲೇ ಕನ್ನಡ ಆವೃತ್ತಿಯಿಂದ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿರುವುದು ಗಮನ ಸೆಳೆದಿದೆ. ಮತ್ತೊಂದೆಡೆ ಹಿಂದಿ ಆವೃತ್ತಿಗೂ ಉತ್ತರ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.
ಇದನ್ನೂ ಓದಿ:
ಗಂಟೆಗೆ ಸಾವಿರಾರು ಟಿಕೆಟ್ ಸೇಲ್
ಆನ್‌ಲೈನ್ ಬುಕಿಂಗ್ ವೇದಿಕೆಗಳಲ್ಲಿ ‘ಟಾಕ್ಸಿಕ್’ಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಭಾನುವಾರದ ವೇಳೆಗೆ ಪ್ರತಿ ಗಂಟೆಗೆ ಸುಮಾರು 10 ಸಾವಿರ ಟಿಕೆಟ್‌ಗಳು ಮಾರಾಟವಾಗುತ್ತಿದ್ದವು ಎನ್ನಲಾಗಿದೆ. ಇದರಿಂದ ಚಿತ್ರದ ಮೊದಲ ದಿನದ ಕಲೆಕ್ಷನ್ ಕುರಿತು ಬಾಕ್ಸ್ ಆಫೀಸ್ ವಿಶ್ಲೇಷಕರ ನಿರೀಕ್ಷೆಯೂ ಹೆಚ್ಚಾಗಿದೆ.
ಬಿಗ್ ಸಿನಿಮಾಗಳ ದಾಖಲೆಗಳಿಗೆ ಯಶ್ ಸವಾಲು
ಮೊದಲ 24 ಗಂಟೆಗಳ ಅಡ್ವಾನ್ಸ್ ಬುಕಿಂಗ್‌ನಲ್ಲೇ ‘ಟಾಕ್ಸಿಕ್’ ಸುಮಾರು 2.5 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎನ್ನಲಾಗಿದೆ. ಈ ಮೂಲಕ ‘ಜವಾನ್’, ‘ಧುರಂಧರ್ 2’ ಹಾಗೂ ‘ಅನಿಮಲ್’ ಸಿನಿಮಾಗಳ ಆರಂಭಿಕ ಮುಂಗಡ ಬುಕಿಂಗ್ ಸಂಖ್ಯೆಯನ್ನು ಹಿಂದಿಕ್ಕಿದೆ ಎಂಬ ವರದಿಗಳು ಹೊರಬಿದ್ದಿವೆ.
ರಿಲೀಸ್‌ಗೂ ಮುನ್ನವೇ ಮುಂಗಡ ಬುಕಿಂಗ್‌ನಲ್ಲಿ ಇಷ್ಟೊಂದು ಸದ್ದು ಮಾಡಿರುವ ‘ಟಾಕ್ಸಿಕ್’, ತೆರೆಕಂಡ ಬಳಿಕ ಬಾಕ್ಸ್ ಆಫೀಸ್‌ನಲ್ಲಿ ಯಾವ ಮಟ್ಟಿಗೆ ಕಮಾಲ್ ಮಾಡಲಿದೆ ಎಂಬುದೇ ಈಗ ಅಭಿಮಾನಿಗಳ ಕುತೂಹಲ.



